ಚಾಲಕರೊಬ್ಬರೇ ಕಾರಿನಲ್ಲಿ ಇದ್ದರೆ ಮಾಸ್ಕ್ ಅಗತ್ಯವಿಲ್ಲ

ನವದೆಹಲಿ: ಒಬ್ಬರೇ ಕಾರು ಚಾಲನೆ ಮಾಡು ವವರು ಮಾಸ್ಕ್ ಧರಿಸುವ ಅಗತ್ಯ ಇಲ್ಲ ಮತ್ತು ಮಾಸ್ಕ್ ಧರಿಸದಿದ್ದ ದಂಡ ವಿಧಿಸು ವಂತಿಲ್ಲ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.


ಕೋವಿಡ್ ನಿರ್ವಹಣೆ ಕುರಿತ ಪತ್ರಿಕಾ ಗೋಷ್ಠಿಯಲ್ಲಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಒಂದು ಗುಂಪಿನಲ್ಲಿ ವ್ಯಾಯಾಮ ಮಾಡುವ ಜನರು ಮಾಸ್ಕ್ ಗಳನ್ನು ಧರಿಸಬೇಕು ಮತ್ತು ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಬೇಕು. ಆದರೆ ವಾಹನದಲ್ಲಿ ಒಬ್ಬರೇ ಇರುವವರಿಗೆ ಮಾತ್ರ ಇದು ಅನ್ವಯಿಸುವುದಿಲ್ಲ ಎಂದಿ ದ್ದಾರೆ.


ಮುಖ್ಯವಾಗಿ ದೆಹಲಿಯಲ್ಲಿ ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಧರಿಸದ ವರಿಗೆ ಪೊಲೀಸರು ಚಲನ್‌ಗಳನ್ನು ವಿತರಿ ಸುವ ಅಥವಾ ದಂಡ ಕೇಳುವ ಹಲವಾರು ನಿದರ್ಶನಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯ ಈ ಸ್ಪಷ್ಟೀಕರಣ ನೀಡಿದ್ದಾರೆ.

 
 
 
 
 
 
 
 
 
 
 

Leave a Reply