ತಿರುಪತಿ ದೇಗುಲದ ಗರ್ಭಗುಡಿ ಬಂದ್​​

ಮುಂದಿನ ವರ್ಷ ಫೆಬ್ರವರಿ ತಿಂಗಳಿನಿಂದ ತಿರುಮಲ ತಿರುಪತಿ ದೇಗುಲದ ಆನಂದ ನಿಲಯದ ಚಿನ್ನದ ಲೇಪನ ಕಾರ್ಯ ಆರಂಭಗೊಳ್ಳಲಿದ್ದು ಈ ಚಿನ್ನದ ಲೇಪನ ಕಾರ್ಯ ಸಂಪೂರ್ಣ ಪೂರ್ಣಗೊಳ್ಳಲು ಏನಿಲ್ಲವೆಂದರು ಆರು ತಿಂಗಳು ಬೇಕಾಗುತ್ತದೆ ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈ,ವಿ ಸುಬ್ಬರಾವ್​ ಮಾಹಿತಿಯನ್ನು ನೀಡಿದ್ದಾರೆ.
 
 ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ಅತ್ಯಂತ ಶ್ರೀಮಂತ ತಿರುಮಲ ದೇವಸ್ಥಾನದ ಭಕ್ತಗಣಕ್ಕೆ ಯಾವುದೇ ಕೊರತೆಯಿಲ್ಲ. ಪ್ರತಿ ವರ್ಷ ಕೋಟ್ಯಂತರ ಭಕ್ತರು ತಿರುಮಲನ ದರ್ಶನವನ್ನು ಮಾಡೋಕೆ ತಿರುಪತಿಗೆ ಭೇಟಿ ನೀಡುತ್ತಾರೆ. ಮುಂದಿನ ವರ್ಷದಲ್ಲಿ ನೀವೇನಾದರೂ ತಿರುಮಲ ದರ್ಶನವನ್ನು ಮಾಡುವ ಪ್ಲಾನ್ ಇಟ್ಟುಕೊಂಡಿದ್ದರೆ ನಿಮಗೊಂದು ಬಹುಮುಖ್ಯ ಮಾಹಿತಿ ಇಲ್ಲಿದೆ.

ತಿರುಪತಿ ಜಿಲ್ಲೆಯ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು ಮುಂದಿನ ವರ್ಷ ಆರರಿಂದ ಎಂಟು ತಿಂಗಳುಗಳ ಕಾಲ ಮುಚ್ಚಲಾಗುತ್ತೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಭಾರತದ ಅತ್ಯಂತ ಶ್ರೀಮಂತ ದೇವಾಲಯದ ಆಡಳಿತವನ್ನು ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ – ಟಿಟಿಡಿ ಇಂತಹದ್ದೊಂದು ನಿರ್ಧಾರವನ್ನು ಕೈಗೊಳ್ಳಲಿದೆ ಅಂತಾ ಹಿಂದೂಸ್ಥಾನ್​ ಟೈಮ್ಸ್​ ವರದಿ ಮಾಡಿದೆ.

ತಿರುಮಲ ಗರ್ಭಗುಡಿಯ ಮೇಲಿರುವ ಮೂರು ಅಂತಸ್ಥಿನ ವಿಮಾನ (ಗುಮ್ಮಟ ಆಕಾರದ ಗೋಪುರ) ಆನಂದ ನಿಲಯದ ಚಿನ್ನದ ಲೇಪವನ್ನು ಬದಲಿಸಿಲು ಟಿಟಿಡಿ ಮುಂದಾಗಿದ್ದು ಈ ಕೆಲಸ ಪೂರ್ಣಗೊಳ್ಳುವವರೆಗೂ ಭಕ್ತರಿಗೆ ಮುಖ್ಯ ದೇವಸ್ಥಾನದ ಪಕ್ಕದಲ್ಲಿರುವ ತಾತ್ಕಾಲಿಕ ದೇಗುಲದಲ್ಲಿ ವೆಂಕಟೇಶ್ವರನ ವಿಗ್ರಹದ ಪ್ರತಿಕೃತಿಯನ್ನು ಸ್ಥಾಪಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Leave a Reply