Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

ಎಡನೀರು ಶ್ರೀಗಳಿಗೆ ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಶ್ರದ್ಧಾಂಜಲಿ

ಶನಿವಾರ ನಡುರಾತ್ರಿ ನಮ್ಮನ್ನಗಲಿ ಕಾಸರಗೋಡು ಎಡನೀರು ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ತೀರ್ಥ ಮಹಾಸ್ವಾಮಿಗಳ ದಿವ್ಯಾತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸಿ ಉಡುಪಿಯ ಎಸ್ ಎಮ್ ಎಸ್ ಪಿ ಸಂಸ್ಕೃತ ಮಹಾವಿದ್ಯಾಲಯ ಮತ್ತು ಉಡುಪಿಯ ನಾಗರಿಕರು ಶ್ರೀಗಳ ಅಭಿಮಾನಿಗಳ ವತಿಯಿಂದ ಶ್ರದ್ಧಾಂಜಲಿ ಸಭೆಯು ಭಾನುವಾರ ಕಾಲೇಜಿನ ಆವರಣದಲ್ಲಿ ನಡೆಯಿತು.

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ ಎಡನೀರು ಶ್ರೀಗಳ ಅಧ್ಯಾತ್ಮಿಕ , ಸಾಂಸ್ಕೃತಿಕ , ಶೈಕ್ಷಣಿಕ ಸಾಮಾಜಿಕ ಮತ್ತು ಧಾರ್ಮಿಕ ಕೊಡುಗೆಗಳನ್ನು ಹಾಗೂ ಉಡುಪಿಯ ಮಠಗಳು ಸಂಸ್ಕೃತ ಕಾಲೇಜಿನೊಂದಿಗಿನ‌ ಬಾಂಧವ್ಯ ವನ್ನು ಸ್ಮರಿಸಿ ಅವರ ಆದರರ್ಶಗಳು ನಮಗೆಲ್ಲ ಸದಾ ಮಾರ್ಗದರ್ಶಕವಾಗಲಿ .

ಅವರ ದಿವ್ಯಾತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿ ನುಡಿನಮನ ಸಲ್ಲಿಸಿದರು . ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ದೇವಾ ನಂದ ಉಪಾಧ್ಯಾಯ , ಪ್ರಾಚಾರ್ಯ ಡಾ ಎನ್ ಎಲ್ ಭಟ್ , ಪೇಜಾವರ ಮಠದ ದಿವಾನ ಎಂ ರಘುರಾ ಚಾರ್ಯ , ಉದ್ಯಮಿ ಯಶ್ ಪಾಲ್ ಸುವರ್ಣ , ಉಡುಪಿ ಸಾಮಾಜಿಕ ಅರಣ್ಯ ವಿಭಾಗ ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್ಯ , ಯಕ್ಷಗಾನ ಕಲಾ ರಂಗದ ಉಪಾಧ್ಯಕ್ಷ ಎಸ್ ವಿ ಭಟ್ , ಕಾಲೇಜಿನ ಆಡಳಿತ ಮಂಡಳಿ ಸದಸ್ಯರು , ಉಪನ್ಯಾಸಕ ವೃಂದ ವಿದ್ಯಾರ್ಥಿಗಳು , ನಾಗರಿಕರು ಉಪಸ್ಥಿತರಿದ್ದರು . ಶ್ರೀಗಳ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸಿ ರಾಮ ಮಂತ್ರ ಸಾಮೂಹಿಕವಾಗಿ ಜಪಿಸಲಾಯಿತು .

ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು .

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!