ಮಂದಾರ್ತಿ ಅಮ್ಮನಿಗೆ ‘ಸ್ವರ್ಣ’ ರಚಿತ ಮುಖ ಕವಚ 

ಉಡುಪಿ : ಪ್ರಸಿದ್ಧ ಹಾಗೂ ಕಾರಣಿಕೆಯ ಪುಣ್ಯಕ್ಷೇತ್ರವಾಗಿರುವ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಶ್ರೀ ದೇವಿ​ಗೆ ಶಶಿಧರ ಶೆಟ್ಟಿ ಎನ್ ಮತ್ತು ಅವರ ಕುಟುಂಬದವರು ಸೇವಾ​ರ್ಥ ಉಡುಪಿಯ  ಸ್ವರ್ಣ ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಚಿನ್ನಾಭರಣ ಉತ್ಪಾದನಾ ಘಟಕವಾದ `ಸ್ವರ್ಣೋದ್ಯಮ’ದಲ್ಲಿ ನಿರ್ಮಿಸಿಕೊಟ್ಟ ಚಿನ್ನದ ಮುಖ ಕವಚವನ್ನು ಅ.11ರ ಭಾನುವಾರದಂದು ಒಪ್ಪಿಸಲಾಯಿತು.

ಶ್ರೀ ದೇವಳದ ಆನುವಂಶೀಯ ಟ್ರಸ್ಟಿ ಮ​​ತ್ತು ಹಾಲಿ ಅಧ್ಯಕ್ಷರಾಗಿರುವ ಶ್ರೀ ಧನಂಜಯ ಶೆಟ್ಟಿ ಆವರಿಗೆ ಸ್ವರ್ಣ ಮುಖ ಕವಚವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಋಷೀಕೇಶ ಬಾಯಿರಿ (ತಂತ್ರಿಗಳು), ಸದಾಶಿವ ಉಡುಪ (ಅರ್ಚಕರು), ಶ್ರೀ ಶಶಿಧರ ಎನ್ ಶೆಟ್ಟಿ ಮತ್ತು ಕುಟುಂಬದವರು, ಜಯರಾಮ ಎನ್ ಶೆಟ್ಟಿ ಮತ್ತು ಕಟುಂಬದವರು, ಸ್ವರ್ಣ ಜ್ಯುವೆಲ್ಲರ್ಸ್ನ ಗುಜ್ಜಾಡಿ ರಾಮದಾಸ ನಾಯಕ್ ಮತ್ತು  ಗುಜ್ಜಾಡಿ ದೀಪಕ್ ಆರ್. ನಾಯಕ್, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಹೇಶ್ ಉಪಸ್ಥಿತರಿದ್ದರು. 

ದೇವರು ಮತ್ತು ದೈವಗಳ ಚಿನ್ನಾಭರಣಗಳು, ಪಲ್ಲಕ್ಕಿ ಮತ್ತು ಪರಿಕರಗಳನ್ನು ಕಲಾತ್ಮಕವಾಗಿ ಮತ್ತು ಅತ್ಯಾಕರ್ಷಕವಾಗಿ ನಿರ್ಮಿಸುವಲ್ಲಿ ಪ್ರಸಿದ್ಧವಾಗಿರುವ ಉಡುಪಿಯ ಸ್ವರ್ಣ ಜ್ಯುವೆಲ್ಲರ್ಸ್ ಸಂಸ್ಥೆಯು ರಾಜ್ಯದ ವಿವಿಧೆಡೆ 9 ಚಿನ್ನಾಭರಣ ಮಳಿಗೆಗಳನ್ನು ಹಾಗೂ ಒಂದು ಉತ್ಪಾದನಾ ಘಟಕವನ್ನು ಹೊಂದಿದೆ. ​​

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply