ವಿದ್ಯಾಗಮ ಯೋಜನೆಯಿಂದ ಶಿಕ್ಷಕ ದಂಪತಿಗಳಲ್ಲಿ ಕೊರೊನಾ ಗಂಭೀರ 

ಮೂಡುಬಿದಿರೆ: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ವಿದ್ಯಾಗಮ ಯೋಜನೆಯಿಂದ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿದ್ದ ದಂಪತಿಯಲ್ಲಿ ಕೊರೊನಾ ಪತ್ತೆಯಾಗಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನು ಇವರ ಮಗಳು ತಂದೆ-ತಾಯಿಯ ಆರೋಗ್ಯದ ಖರ್ಚು ಭರಿಸಲು ಪರದಾಡುವ ಸ್ಥಿತಿ ಉಂಟಾಗಿದೆ. ಆಕೆ ಮೂಡುಬಿದಿರೆಯ ಸ್ಥಳೀಯ ಎಂಜಿನಿಯ ರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಐಶ್ವರ್ಯ ಜೈನ್. ತಂದೆ ಶಶಿಕಾಂತ್ ವೈ ಸ್ಥಳೀಯ ಡಿಜೆ ಅನುದಾನಿತ ಶಾಲಾ ಮುಖ್ಯ ಶಿಕ್ಷಕ ಹಾಗೂ ತಾಯಿ ಪದ್ಮಾಕ್ಷಿ ಎನ್, ಮಕ್ಕಿಯ ಜವಾಹರಲಾಲ ನೆಹರೂ ಅನುದಾನಿತ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದರು.

ವಿದ್ಯಾಗಮದ ಕೆಲಸಕ್ಕಾಗಿ ಹಾಜರಾಗಿದ್ದ ಇಬ್ಬರಲ್ಲೂ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಅವರಲ್ಲಿ ಪತಿ ಶಶಿಕಾಂತ್ ಸುಧಾರಿಸಿಕೊಳ್ಳುತ್ತಿದ್ದು ಪದ್ಮಾಕ್ಷಿ ಅವರು ಕಳೆದ ಸೆ.29ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಚಿಕಿತ್ಸೆಗೆ ಒಂದು ದಿನಕ್ಕೆ 30 ಸಾವಿರದಷ್ಟು ಆಸ್ಪತ್ರೆ ವೆಚ್ಚವಾಗಿತ್ತಿದ್ದು ಈಗಾಗಲೇ 6ರಿಂದ 7ಲಕ್ಷ ರೂ ಖರ್ಚಾಗಿದೆ.

ನನ್ನ ತಂದೆತಾಯಿ ಆರೋಗ್ಯವಾಗಿದ್ದರು. ವಿದ್ಯಾಗಮನದಿಂದಾಗಿ ನನ್ನ ಅಮ್ಮನ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ. ನನ್ನ ಅಮ್ಮನಿಗೆ ಏನಾದರೂ ಆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಪುತ್ರಿ ಆಕ್ರೋಶದಿಂದ ತಮ್ಮ ಅಳಲನ್ನು ವ್ಯಕ್ತ ಪಡಿಸಿದ್ದರು. ಸದ್ಯದ ಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟವೂ ಎದುರಾಗಿದ್ದು ಈ ಬಗ್ಗೆ ಪುತ್ರಿ ಐಶ್ವರ್ಯಾ ಜೈನ್ ಸಹಾಯಕ್ಕಾಗಿ
ಸಾಮಾಜಿಕ ಜಾಲ ತಾಣದಲ್ಲಿ ಮನವಿ ಮಾಡಿದ್ದರು.

ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸೇರಿದಂತೆ ರಾಜ್ಯದ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದ್ದು ಇದರೊಂದಿಗೆ ಶಾಸಕ, ಸಂಸದರ ಜತೆಗೆ ವಿವಿಧ ಇಲಾಖೆಯವರಿಗೂ ಮನವಿ ಮಾಡಿ ದ್ದಾರೆ. ಈ ಮನವಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಐಶ್ವರ್ಯ ಅವರಿಗೆ ಎಲ್ಲೆಡೆಯಿಂದ ಧೈರ್ಯ ತುಂಬುವ ಕರೆಗಳು ಬಂದಿದ್ದು ಸರ್ಕಾರವು ಸಹಾಯದ ಭರವಸೆ ನೀಡಿದೆ. ಇವರ ಮನವಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

 

 

 
 
 
 
 
 
 
 
 
 
 

Leave a Reply