ದಸರಾ ಹಬ್ಬದಲ್ಲಿ 10 ಹುಲಿವೇಷಧಾರಿಗಳಿಗೆ ಮಾತ್ರ ದೇವಸ್ಥಾನದ ಆವರಣದೊಳಗೆ ಅವಕಾಶ  

ಮಂಗಳೂರು: ಕೊರೋನ ಕಾರಣ ದಸರಾ ಹಬ್ಬದಲ್ಲಿ 10 ಹುಲಿವೇಷಧಾರಿಗಳಿಗೆ ಮಾತ್ರ ದೇವಸ್ಥಾನದ ಆವರಣದೊಳಗೆ ಹರಕೆ ಸಮರ್ಪಿಸಲು ಅವಕಾಶ ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.

ಹುಲಿವೇಷಕ್ಕೆ ನಿಗದಿತ ಕಾಲಮಿತಿಯಲ್ಲಿ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಲು ಮಂಗಳವಾರ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಹರಕೆಯ ಹುಲಿವೇಷ ಸಂದರ್ಭ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಅದರೊಂದಿಗೆ ಸ್ಯಾನಿಟೈಸರ್ ಬಳಕೆಯನ್ನು ಗಮನಿಸಿ ಸುವುದು ದೇವಸ್ಥಾನದ ಆಡಳಿತದಾರರ ಜವಾಬ್ದಾರಿ ಎಂದಿದ್ದಾರೆ. ಮಾರ್ಗಸೂಚಿಯ ನಿಯಮ ಪಾಲನೆಯಾಗದಿದ್ದಲ್ಲಿ ಸಂಬಂಧಪಟ್ಟ ದೇವಸ್ಥಾನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಹುಲಿ ವೇಷಧಾರಿಗಳು ದೇವಸ್ಥಾನ ಹೊರತುಪಡಿಸಿ ಸಾರ್ವಜನಿಕ ಪ್ರದೇಶದಲ್ಲಿ ಪ್ರದರ್ಶನ ನೀಡುವುದನ್ನು ತಡೆಯಲು ಹಾಗೂ ಪಟಾಕಿ, ಸುಡುಮದ್ದು ಸಂಪೂರ್ಣವಾಗಿ ನಿಷೇಧಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply