ಮೀನುಗಾರರ ಸಮಸ್ಯೆಗಳಿಗೆ ಧ್ವನಿಯಾಗಿ ಫೆಡರೇಶನ್ ನಿರಂತರವಾಗಿ ಕಾರ್ಯನಿರ್ವಹಿಸಲಿದೆ: ಯಶ್‌ಪಾಲ್ ಎ. ಸುವರ್ಣ

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ೨೦೨೨-೨೩ ನೇ ಸಾಲಿನ ವಾರ್ಷಿಕ ಮಹಾಸಭೆಯು ಎಮ್ಮೆಕೆರೆ, ಪಾಂಡೇಶ್ವರದ ರಮಾ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣರವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಯಶ್‌ಪಾಲ್ ಎ. ಸುವರ್ಣ, ಕರಾವಳಿ ಜಿಲ್ಲೆಯ ಮೀನುಗಾರರ ಸಮಸ್ಯೆ ಬೇಡಿಕೆಗಳಿಗೆ ಹಲವು ದಶಕಗಳಿಂದ ಸ್ಪoದಿಸಿ ಮೀನುಗಾರರ ಸಮಸ್ಯೆಗಳಿಗೆ ಧ್ವನಿಯಾಗಿ ಫೆಡರೇಷನ್
ಕಾರ್ಯನಿರ್ವಹಿಸುತ್ತಿದ್ದು, ಮೀನುಗಾರರಿಗೆ ಅನುಕೂಲವಾಗುವಂತೆ ಮೀನಿಗೆ ಉತ್ತಮ ದರ ನಿಗದಿಪಡಿಸುವ ನಿಟ್ಟಿನಲ್ಲಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಹಾಗೂ ಮುಂದಿನ ದಿನಗಳಲ್ಲಿ
ಫೆಡರೇಷನ್ ಮೂಲಕ ತಾಲೂಕು ಕೇಂದ್ರಗಳಲ್ಲಿ ಮತ್ಸö್ಯ ಕ್ಯಾಂಟೀನ್ ಆರಂಭಿಸಿ ಮೀನಿನ ಖಾದ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ಯೋಜನೆ ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಿದೆ ಎಂದರು.
ಫೆಡರೇಶನ್ ಮಹಾಸಭೆಗೆ ೬೧ “ಬಿ” ವರ್ಗದ ಸದಸ್ಯರು ಮತ್ತು ೧೦೫೦ “ಸಿ” ವರ್ಗದ ಸದಸ್ಯರು ಮತ್ತು ಸರಕಾರದ ಪ್ರತಿನಿಧಿಗಳು ಹಾಜರಿದ್ದರು. ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ, ಮತ್ಸಾö್ಯಶ್ರಯ ವಸತಿ ಸಹಾಯಧನ ಏರಿಕೆ, ಅಂಬಿಗರ ಚೌಡಯ್ಯ ನಿಗಮದ ವಿದ್ಯಾರ್ಥಿ ವೇತನ, ಮೀನುಗಾರ ಮಹಿಳೆಯರ ಶೂನ್ಯ ಬಡ್ಡಿದರ ಸಾಲ ಸಹಿತ
ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠನಕ್ಕೆ ಫೆಡರೇಶನ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಪ್ರಾಥಮಿಕ ಮೀನುಗಾರ ಸಹಕಾರಿ ಸಂಸ್ಥೆಯ ಸದಸ್ಯರಿಗೆ ತರಬೇತಿ ಕಾರ್ಯಗಾರ ಹಾಗೂ ಪ್ರಧಾನಮಂತ್ರಿ ಮತ್ಸö್ಯ ಸಂಪದ
ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಶೀಘ್ರದಲ್ಲೇ ಏರ್ಪಡಿಸಲಾಗುವುದು.
ಕಾಪುವಿನಲ್ಲಿ ಬ್ಯಾಂಕಿoಗ್ ವಿಭಾಗ ಸದ್ಯದಲ್ಲೇ ಕಾರ್ಯಾಚರಿಸಲಿದ್ದು, ಫೆಡರೇಶನ್ ವತಿಯಿಂದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಕಾರದಿಂದ ಮಂಗಳೂರು
ನಗರದ ಕೇಂದ್ರ ಭಾಗವಾದ ಊರ್ವ ಸ್ಟೋರ್ ನಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ “ಮತ್ಸö್ಯ ಸಂಪದ” ನೂತನ ಪ್ರಧಾನ ಕಚೇರಿ ಕಟ್ಟಡ ಹಾಗೂ ಸಮುದಾಯ
ಭವನದ ಕಾಮಗಾರಿ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಮಹಾಸಭೆಯಲ್ಲಿ ಆಡಳಿತಮಂಡಳಿ ಹಾಗೂ ಸರ್ವಸದಸ್ಯರ ವತಿಯಿಂದ ಶಾಸಕರಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಯಶ್ ಪಾಲ್ ಎ, ಸುವರ್ಣರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು, ದಕ್ಷಿಣ ಕನ್ನಡ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾಗಿ
ಪದೋನ್ನತಿಗೊಂಡ ಶ್ರೀ ಹರೀಶ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಿಳಾ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷರಾಗಿ ಆಯ್ಕೆಯಾದ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಉಷಾರಾಣಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೀನುಗಾರಿಕಾ
ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅನ್ಮೋಲ್ ಗಿರೀಶ್ ಕುಮಾರ್ ಬೋಳೂರು ಮತ್ತು ಹರ್ಷಲ್ ಎಸ್. ಸಾಲ್ಯಾನ್ ರವರಿಗೆ ವ್ಯಾಸಂಗ ವೆಚ್ಚದ ಚೆಕ್ ವಿತರಿಸಲಾಯಿತು. ಜನರಲ್ ಮೆರೈನ್ ಫಿಶರೀಸ್ ಚೆನ್ನೆöÊ ಇದರ ಹಿರಿಯ ವಿಜ್ಞಾನಿ ಜೋಯಿ ಕೊಯಿಕುಡನ್‌ರವರು ಕೃತಕ ರೀಫ್ ಮೀನುಗಾರಿಕೆ ವಿಧಾನದ ಬಗ್ಗೆ ಸದಸ್ಯರಿಗೆ ಮಾಹಿತಿ ಕಾರ್ಯಗಾರ ನಡೆಸಿದರು. ಈ ಸಂದರ್ಭದಲ್ಲಿ ಗಣ್ಯರಾದ ಆನಂದ ಪಿ.
ಸುವರ್ಣ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಡಿವಿಜನಲ್ ಮ್ಯಾನೇಜರ್
ಮುಧುಪ್ ದ್ವಿವೇದಿ ಉಪಸ್ಥಿತರಿದ್ದರು.
ಫೆಡರೇಶನಿನ ೨೦೨೨-೨೩ ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಹಾಸಭೆಯಲ್ಲಿ ಮಂಡಿಸಿದರು. ಸಂಸ್ಥೆಯ ಅಭಿವೃದ್ಧಿಯ ಚಟುವಟಿಕೆಗಳ ಬಗ್ಗೆ ಹಾಗೂ ನಿರಂತರ ಲಾಭದಾಯಕವಾಗಿ ಮುನ್ನಡೆಸುತ್ತಿರುವ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಮಹಾಸಭೆಯಲ್ಲಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದರು.
ಸಭೆಯಲ್ಲಿ ಫೆಡರೇಶನಿನ ಆಡಳಿತ ಮಂಡಳಿ ನಿರ್ದೇಶಕರಾದ ರಾಮಚಂದ್ರ ಕುಂದರ್, ಸುಧೀರ್ ಶ್ರೀಯಾನ್, ಸುರೇಶ್ ಸಾಲ್ಯಾನ್, ಸತೀಶ್ ಸಾಲ್ಯಾನ್, ದೇವಪ್ಪ ಕಾಂಚನ್, ಶಿವಾಜಿ ಎಸ್. ಅಮೀನ್, ಆನಂದ, ಸುಧಾಕರ, ಚಿದಾನಂದ, ಶ್ರೀಮತಿ ಬೇಬಿ ಎಚ್ ಸಾಲ್ಯಾನ್, ಶ್ರೀಮತಿ ಇಂದಿರಾ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ದರ್ಶನ್ ಕೆ.ಟಿ ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನಲ್ಲಿ ಫೆಡರೇಶನ್ ಗಳಿಸಿದ ಲಾಭಂಶದಲ್ಲಿ ೨.೧೦ ಕೋಟಿ
ಮೊತ್ತವನ್ನು ಸಂಸ್ಥೆಯ ಸದಸ್ಯ ಗ್ರಾಹಕರಿಗೆ ಪ್ರೋತ್ಸಾಹ ಧನ ನೀಡಿದ್ದು, ೨೫ ಲಕ್ಷ ವೆಚ್ಚದಲ್ಲಿ ಸದಸ್ಯ ಸಹಕಾರಿ ಸಂಘಗಳ ಸದಸ್ಯರಿಗೆ ಆರೋಗ್ಯ ಸುರಕ್ಷಾ ಕಾರ್ಡ್ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 25 ಲಕ್ಷ ಮೊತ್ತ
ವಿದ್ಯಾರ್ಥಿವೇತನ ವಿತರಿಸಿ ಸಾಮಾಜಿಕ ಬದ್ಧತೆ ಮೆರೆದಿದ್ದು, ಮುಂದಿನ
ದಿನಗಳಲ್ಲಿಯೂ ಸಂಸ್ಥೆಯ ಮೂಲಕ ಸಹಕಾರಿ ತತ್ವದಡಿ ಸಾಮಾಜಿಕ ಚಟುವಟಿಕೆಗಳಿಗೆ ಸಹಕಾರ ನೀಡಲಿದೆ.
 
 
 
 
 
 
 
 
 
 
 

Leave a Reply