ಉಡುಪಿ: ಕೆಲಸ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ದಂಪತಿ ಮಗು ರಕ್ಷಣೆ

ಉಡುಪಿ : ನಗದರ ಬಸ್ ನಿಲ್ದಾಣದಲ್ಲಿ ಮಗು ಸಹಿತ ದಂಪತಿ ಮಂಗಳೂರು ಜಿಲ್ಲೆಯಲ್ಲಿ ಕೆಲಸ ಕಳೆದುಕೊಂಡು ವೇತನ ಕೂಡ ಸಿಗದೆ ಅಸಹಾಯಕರಾಗಿ ದುಃಖಿತರಾಗಿದ್ದರು. ಅವರನ್ನು ವಿಶು ಶೆಟ್ಟಿ ರಕ್ಷಿಸಿ ಮಗು ಮತ್ತು ತಾಯಿಯನ್ನು ತಾತ್ಕಾಲಿಕವಾಗಿ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಆಶ್ರಯ ಕಲ್ಪಿಸಿದ್ದಾರೆ. 

ವಿಶು ಶೆಟ್ಟಿ ಎಂದಿನಂತೆ ಅಸಹಾಯಕರಿಗೆ ರಾತ್ರಿಯ ಊಟ ವಿತರಿಸುವ ಸಂಧರ್ಭದಲ್ಲಿ ಉಡುಪಿ ಬಸ್ ನಿಲ್ದಾಣದಲ್ಲಿ ದುಃಖಿತರಾಗಿದ್ದ ದಂಪತಿ ಮಗುವನ್ನು ಗಮನಿಸಿ ವಿಚಾರಿಸಿದ್ದಾರೆ. ತಾವು ಮೂಲತಃ ಗದಗ ಜಿಲ್ಲೆಯವರಾಗಿದ್ದು, ಕರಿಬಸಪ್ಪ ದಂಪತಿ ಮಂಗಳೂರು ಜಿಲ್ಲೆಯಲ್ಲಿ ಒಬ್ಬರ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದು, ಇದೀಗ ಲಾಕ್ ಡೌನ್ ಸಂಧರ್ಭದಲ್ಲಿ ವೇತನವನ್ನು ನೀಡದೆ ಕೆಲಸದಿಂದ ತೆಗೆದು ಹಾಕಿದ್ದರು.ಅಲ್ಲಿಂದ ಮಂಗಳೂರು ಬಸ್ ನಿಲ್ದಾಣಕ್ಕೆ ಬಂದಾಗ ಅಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಉಡುಪಿಗೆ ಹೋಗಲು ಹೇಳಿ ಬಸ್ ಟಿಕೆಟ್ ಗೆ ಹಣವನ್ನು ನೀಡಿ ಕಳುಹಿಸಿದರು.ಇದೀಗ ಊರಿಗೆ ಹೋಗಲು ಬಸ್ ಕೂಡ ಇಲ್ಲದೆ, ಉಡುಪಿಯಲ್ಲಿ ಯಾವುದೇ ಕೆಲಸವೂ ಸಿಗದೆ ಅತಂತ್ರರಾಗಿ ಬಸ್ ನಿಲ್ದಾಣದಲ್ಲಿ ಪತ್ನಿ ಮಗುವಿನೊಂದಿಗೆ ದುಃಖಿತರಾಗಿದ್ದರು.

ಈ ವಿಷಯ ತಿಳಿದ ವಿಶು ಶೆಟ್ಟಿಯವರು ಊಟ ನೀಡಿ ಸಂತೈಸಿಸಿ, ಮಗು ಮತ್ತು ಮಹಿಳೆಯನ್ನು ಸಖಿ ಒನ್ ಸ್ಟಾಪ್ ಸೆಂಟರ್ ಗೆ ದಾಖಲಿಸಿ ಕರಿಬಸಪ್ಪನಿಗೆ ತನ್ನ ವರ್ಕ್ ಶಾಪ್ ನಲ್ಲಿ ರಾತ್ರಿ ಕಳೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಉಡುಪಿಯಲ್ಲಿ ಕೆಲಸ ಸಿಕ್ಕಿದರೆ ಇಲ್ಲಿಯೇ ಉಳಿಯುತ್ತೇನೆ, ಇಲ್ಲದಿದ್ದರೆ ಊರಿಗೆ ಹೋಗಲು ಸಹಕರಿಸಬೇಕಾಗಿ ವಿಶು ಶೆಟ್ಟಿಯಲ್ಲಿ ಕರಿಬಸಪ್ಪ ವಿನಂತಿ ಮಾಡಿದ್ದಾರೆ. ಬಸ್ ಆರಂಭವಾದ ಕೂಡಲೇ, ವಿಶು ಶೆಟ್ಟಿಯವರು ಊರಿಗೆ ಕಳುಹಿಸಿ ಕೊಡುವ ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕೃಷ್ಣ ಅಮೀನ್ ಮೂಡುಬೆಟ್ಟು ಅವರು ಸಹಕರಿಸಿದ್ದಾರೆ.

 
 
 
 
 
 
 
 
 
 
 

Leave a Reply