ಯು.ಪಿ.ಎಂ.ಸಿ- ರಕ್ಷಕ ಶಿಕ್ಷಕ ಸಂಘ ಮಹಾಸಭೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 2023-24 ನೇ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ನವೆಂಬರ್ 18 ರಂದು ಕಾಲೇಜಿನ ಸಭಾಭವನದಲ್ಲಿ ಜರಗಿತು. 

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಶೈಕ್ಷಣಿಕ ವೇಳಾಪಟ್ಟಿಯ ಮೊದಲ ಅರ್ಧವರ್ಷದ ಪಠ್ಯ – ಪಠ್ಯೇತರ ಚಟುವಟಿಕೆಗಳ ಕುರಿತಾದ ವರದಿಯನ್ನು ವಾಚಿಸಿದರು. ಪೋಷಕರು ತಮ್ಮ ಮಕ್ಕಳ ಹಾಜರಾತಿ ಹಾಗು ಆಂತರಿಕ ಪರೀಕ್ಷೆಗಳ ಅಂಕಗಳನ್ನು ಪರಿಶೀಲಿಸಿದರು.

ಅನಂತರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಶ್ರೀ ಅಬ್ದುಲ್ ಹಮೀದ್ ಅಧ್ಯಕ್ಷರಾಗಿ, ಶ್ರೀಮತಿ ಮೀನಾಕ್ಷಿ ಕಾರ್ಯದರ್ಶಿಗಳಾಗಿ ಹಾಗೂ ಶ್ರೀ ನವೀನ್ ಪಾಲನ್, ಶ್ರೀ ಉಮೇಶ್ ಕಾಮತ್, ಶ್ರೀಮತಿ ಶಾಂತಿ, ಶ್ರೀಮತಿ ಫ್ಲೇವಿ, ಶ್ರೀ ಶೇಖ್ ರಿಯಾಜ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಕಾಲೇಜಿನ ಉಪಪ್ರಾಚಾರ್ಯರಾದ ಶ್ರೀ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರಭಾ ಕಾಮತ್ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಶ್ರೀಮತಿ ಸುನೀತಾ ನಾಯಕ್ ಪ್ರಾರ್ಥಿಸಿದರು, ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು, ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ಧನ್ಯವಾದವಿತ್ತರು, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟು, ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 

Leave a Reply