ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ಶಾಲಾ ವಾಟ್ಸಪ್ ಚಾನಲ್‌ ಅನಾವರಣ

ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಕುಂಜಿಬೆಟ್ಟು, ಉಡುಪಿ ಇದರ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲಾ ಹಳೇ ವಿದ್ಯಾರ್ಥಿಗಳಾದ ಶ್ರೀ. ದೀಪಕ್ ಶೆಣೈ ಹಾಗೂ ಶ್ರೀ. ಮಿಥುನ್ ಮನೋಹರ್ ಶೆಣೈ ಅವರ ಸಹಕಾರದೊಂದಿಗೆ ‘ಶಾಲಾ ವಾಟ್ಸಪ್ ಚಾನಲ್‌ನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನಿನ ಕಾರ್ಯದರ್ಶಿಯಾದ ಶ್ರೀ. ಬಿ.ಪಿ ವರದರಾಯ ಪೈ, ಉಡುಪಿ ವಲಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಅಶೋಕ್ ಕಾಮತ್, ಉಡುಪಿ ಜಿಲ್ಲಾ ಕೋಅಪರೇಟಿವ್ ಒಕ್ಕೂಟದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ.ಬಿ.ಜಯಕರ ಶೆಟ್ಟಿ , ಮುಖ್ಯೋಪಾಧ್ಯಾಯಿನಿ ಶ್ರೀಮತಿ. ವಿನೋದಾ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ. ಸುಹಾನಿ ಕಾಮತ್, ವಿದ್ಯಾರ್ಥಿ ನಾಯಕ ಮಾ. ಮಹಮ್ಮದ್ ರುಹಾನ್ ರಿಯಾಸ್, ವಿದ್ಯಾರ್ಥಿ ನಾಯಕಿ ಕು. ಲಾವಣ್ಯ ಎನ್ ಶೇಟ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply