ಬಿಎಸ್‌ಜಿ ಉಡುಪಿಯ ಕಾರ್ಯದರ್ಶಿ ಶ್ರೀ ಕೊಗ್ಗಗಾಣಿಗ ರವರು ನಿಧನ

ಭಾರತ್ ಸ್ಕೌಟ್ಸ್ & ಗೇಟ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಶ್ರೀ ಕೊಗ್ಗಗಾಣಿಗ ರವರು (72) ಅಲ್ಪಕಾಲದ ಅನಾರೋಗ್ಯದಿಂದ ದಿನಾಂಕ 17.08.2022 ರಂದು ನಿಧನರಾಗಿದ್ದಾರೆ. ಸೇಂಟ್ ಮೇರಿ ಶಾಲೆ ಕುಂದಾಪುರದ ಮುಖ್ಯೋಪಾಧ್ಯಾಯರಾಗಿ ಹಾಗೂ ಭಾರತ್ ಸ್ಕೌಟ್ಸ್ & ಗೈಡ್ಸ್ ಉಡುಪಿ ಇದರ District Training Commissioner ಆಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. Leader Trainer ಆಗಿ ಅನೇಕ ಜಿಲ್ಲಾ ಹಾಗೂ ರಾಜ್ಯಮಟ್ಟದ ಶಿಬಿರಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಅನೇಕ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರ ಹಾಗೂ ರಾಷ್ಟ್ರಪತಿ ಪುರಸ್ಕಾರ ಪರೀಕ್ಷಾ ಶಿವರಗಳಲ್ಲಿ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಾರೆ. ಉಡುಪಿ ಜಿಲ್ಲೆಯ ಸರ್ವಾಂಗೀಣ ಸ್ಕೌಟ್ಸ್ ಗೈಡ್ಸ್ ಅಭಿವೃದ್ಧಿಗೆ ಇವರ ಕೊಡುಗೆ ಅಪಾರ. ರಾಜ್ಯ, ರಾಷ್ಟ್ರಮಟ್ಟದ ಜಾಂಬೂರಿ ಹಾಗೂ ಜಾಂಬುರೇಟ್ ಗಳಲ್ಲಿ ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ Contingent Leader ಆಗಿ ತಮ್ಮ ಕೊಡುಗೆಯನ್ನು ನೀಡಿರುತ್ತಾರೆ. ಅಪಾರ ಶಿಕ್ಷಕವೃಂದ, ಅಭಿಮಾನಿಗಳ ಸಹಿತ ಪತ್ನಿ ಒಂದು ಗಂಡು ಹಾಗು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply