ಸೆಲ್ಕೊ ಸಂಸ್ಥೆಯಿಂದ ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಟ್ಯಾಬ್ ವಿತರಣೆ.

ಉಡುಪಿ : ಮಂದಾರ್ತಿಯ ದ್ವಿತೀಯ ಪಿ.ಯು.ಸಿ.ಯಲ್ಲಿ ವಿದ್ಯಾರ್ಜನೆಗೈಯುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಗೀತಾಳಿಗೆ ಸೆಲ್ಕೊ ಸಂಸ್ಥೆಯ ವತಿಯಿಂದ ಇಂದು (06-08-2021) ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಟ್ಯಾಬ್ ನೀಡಲಾಯಿತು.

 

ಸೆಲ್ಕೊ ಸಂಸ್ಥೆಯ ಎ.ಜಿ.ಎಂ ಗುರುಪ್ರಕಾಶ್ ಶೆಟ್ಟಿ ಟ್ಯಾಬ್ ವಿತರಿಸಿ, ನಮ್ಮ ಸಂಸ್ಥೆ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ನಿರಂತರ ನೀಡುತ್ತಾ ಬಂದ ನೆರವನ್ನು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ. ಸದಸ್ಯರಾದ ಅನಂತರಾಜ ಉಪಾಧ್ಯ ಹಾಗೂ ಸೆಲ್ಕೊ ಸಂಸ್ಥೆಯ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply