ಸಮುದಾಯ ಬಾನುಲಿ ಕೇಂದ್ರಗಳು ಸಮುದಾಯದ ಅಭಿವೃದ್ಧಿಗಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಕರ್ನಾಟಕದಲ್ಲಿ ಸುಮಾರು ಇಪ್ಪತ್ತನಾಲ್ಕು ಸಮುದಾಯ ಬಾನುಲಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಶಿಕ್ಷಣ ಸಂಸ್ಥೆಗಳಿಂದ, ಸರಕಾರೇತರ ಸಂಸ್ಥೆಗಳಿಂದ, ಕೃಷಿ ವಿಜ್ಞಾನ ಕೇಂದ್ರಗಳಿಂದ ನಡೆಸಲ್ಪಡುತ್ತಿರುವ ಈ ಸಮುದಾಯ ಬಾನುಲಿ ವ್ಯವಸ್ಥೆ ಸುಸ್ಥಿರ ಅಭಿವೃದ್ಧಿ ಗಾಗಿ ಶ್ರಮಿಸುತ್ತಿವೆ.

ಮಾತ್ರವಲ್ಲದೆ ಇತರ ಸಮೂಹ ಮಾಧ್ಯಮ ಗಳಂತೆ ಸರಕಾರದ ವಿವಿಧ ಇಲಾಖೆಗಳ ಪ್ರಾಯೋಜಕತ್ವದ ಕಾರ್ಯಕ್ರಮಗಳನ್ನು ಪಡೆಯುವಲ್ಲಿ ವಿಫಲವಾಗಿವೆ.

ಈ ನಿಟ್ಟಿನಲ್ಲಿ ಸರಕಾರದ ಗಮನವನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಸಮುದಾಯ ಬಾನುಲಿ ಕೇಂದ್ರಗಳ ಮುಖ್ಯಸ್ಥರು ಜೂನ್ 2ರಂದು ಮಧ್ಯಾಹ್ನ 3 ಗಂಟೆಗೆ ನಡೆದ ಆನ್‌ಲೈನ್ ಮೀಟ್‌ನಲ್ಲಿ ಭಾಗವಹಿಸಿ ಕರ್ನಾಟಕ ಸಮುದಾಯ ಬಾನುಲಿಗಳ ಅಭಿವೃದ್ಧಿ,ಮುಂದಿನ ಯೋಜನೆ ಗಳ ಕುರಿತಾಗಿ ಚರ್ಚಿಸಿ ಸುದೀರ್ಘ ಸಭೆ ಯನ್ನು ನಡೆಸಿದರು.

ಕೊರೊನಾ ಕಾಲಘಟ್ಟದ ನಂತರ ರಾಜ್ಯದ ಎಲ್ಲಾ ಸಮುದಾಯ ಬಾನುಲಿಗಳ ಒಗ್ಗೂಡುವಿಕೆಯಲ್ಲಿ ನಡೆಸಿದ ಮೊದಲ ವರ್ಚುವಲ್ ಮೀಟ್ ಇದಾಗಿತ್ತು. ಸಂಘಟಿತ ರಾಗುವ ದೃಷ್ಟಿಯಿಂದ ಈ ಸಭೆಯಲ್ಲಿ ಸಮುದಾಯ ಬಾನುಲಿಗಳ ರಾಜ್ಯಮಟ್ಟದ ಸಂಘದ ಸ್ಥಾಪನೆ ಕುರಿತಾಗಿಯೂ ಚರ್ಚಿಸ ಲಾಯಿತು ಮತ್ತು ಮುಂದಿನ ಮುಖಾಮುಖಿ ಯಾಗಿ ನಡೆಸುವ ಸಭೆಯಲ್ಲಿ ಈ ಕುರಿತು ಕಾರ್ಯ ಪ್ರವೃತ್ತರಾಗಲು ನಿರ್ಣಯಿಸ ಲಾಯಿತು.

ಈ ವರ್ಚುವಲ್ ಮೀಟ್ ನ್ನು ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರದ ಡಾ.ರಶ್ಮಿ ಅಮ್ಮೆಂಬಳ ಆಯೋಜಿ ಸಿದ್ದರು. ಬಾಗಲಕೋಟೆಯ ಬಿ.ಇ.ಸಿ ಧ್ವನಿಯ ಭರತ್ ಬಡಿಗೇರ್ ಸಹಕರಿಸಿದರು.
ಶಿವಶಂಕರ್, ಶಮಂತ ಡಿ.ಎಸ್, ಶಿವಾಜಿ ಗಣೇಶನ್, ಡಾ.ಶಿವರಾಜ್ ಶಾಸ್ತ್ರಿ, ಶಿವ ಕುಮಾರ್, ನಿಂಗರಾಜು ಅಭಿಷೇಕ್, ವಿಶ್ವ ನಾಥ್, ವರುಣ್ ಕಂಜರ್ಪಣೆ, ರವೀಂದ್ರ ಕವಟೇಕರ್ , ವಿ.ಕೆ ಕಡಬ, ಮಂಜುನಾಥ್, ಸುರೇಖಾ ಸಂಕನಗೌಡರ್,ಗುರುಪ್ರಸಾದ್, ಪಾಂಡುರಂಗ ವಿಠ್ಠಲ್, ಕಿರಣ್ ಚೌಗ್ಲಾ, ಸಾಯಿಬಾಬು, ರಮ್ಯ, ತೆಜಸ್ವಿನಿ, ಸುಲೋಚನ, ಲಲಿತ ಅಸೂತಿ,
ದೇವೇಂದ್ರ, ಡಾ.ಶಿವಲಿಂಗಯ್ಯ, ಜನಾರ್ದನ್, ಅನಂತ್ ಮೊದಲಾದವರು ಉಪಸ್ಥಿತ ರಿದ್ದರು.

 
 
 
 
 
 
 
 
 
 
 

Leave a Reply