ಮೈಸೂರು : ಪೌರಸನ್ಮಾನ ಸಮಾರಂಭ ಉದ್ಘಾಟನೆ

ಪ್ರಪಂಚದ ಹಲವೆಡೆ ಹಿಂದು ಸಂಸ್ಕೃತಿಯನ್ನು ವಿಸ್ತರಿಸಿ ಹಿಂದುಗಳು ಅಭಿಮಾನದಿಂದ ತಲೆ ಎತ್ತಿ ನಿಲ್ಲುವಂತೆ ಮಾಡುವಲ್ಲಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರ ಪಾತ್ರ ಅನನ್ಯ ಎಂದು ವಿದ್ವಾಂಸ ರಮಣಾಚಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪರ್ಯಾಯ ಪರಿಕ್ರಮ ಯಾತ್ರೆ, ಕೋಟಿ ಗೀತಾ ಲೇಖನಯಜ್ಞ ಪ್ರಚಾರ ಕೈಗೊಂಡು ಮೈಸೂರು ನಗರಕ್ಕೆ ಆಗಮಿಸಿದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥರಿಗೆ ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಗತ ಮತ್ತು ಪೌರಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಶ್ರೀ ಸುಗುಣೇಂದ್ರತೀರ್ಥರು ಮಾಡಿದ ಸಾಧನೆ ಅದ್ಭುತ. ಶ್ರೀಗಳನು ಅಭಿನವ ವಿವೇಕಾನಂದ ಎಂದೇ ಕರೆಯಲಾಗುತ್ತದೆ ಎಂದು ಅವರು ಬಣ್ಣಿಸಿದರು. ಶ್ರೀಗಳ ಆಂಗ್ಲಭಾಷಾ ಪ್ರವಚನ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಭಾಷೆಯ ಮೇಲೆ ಶ್ರೀಗಳು ಹಿಡಿತ ಹೊಂದಿದ್ದಾರೆ. ಜಾಗತಿಕವಾಗಿ ಭಕ್ತರನ್ನು ತಲುಪುವ ವಿಶೇಷ ಪ್ರಯತ್ನವನ್ನು ಶ್ರೀಗಳು ಮಾಡಿದ್ದಾರೆ ಎಂದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಲೇಖಕ ಕಬ್ಬಿನಾಲೆ ವಸಂತ ಕುಮಾರ್ ಭಾರದ್ವಾಜ್, ಶ್ರೀ ಕೃಷ್ಣಮಿತ್ರ ಮಂಡಳಿ ಅಧ್ಯಕ್ಷ ರಮೇಶ್, ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ , ಪಿ.ಎಸ್. ಶೇಖರ್, ವಿದ್ವಾಂಸ ಪದ್ಮನಾಭ ಆಚಾರ್ ಇದ್ದರು.

ಮೈಸೂರು ನಗರದ ಸರಸ್ವತಿಪುರಂನ ಶ್ರೀಕೃಷ್ಣ ಧಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಗತ ಮತ್ತು ಪೌರಸನ್ಮಾನ ಸಮಾರಂಭವನ್ನು ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಉದ್ಘಾಟಿಸಿದರು.

ಸುಶ್ರೀಂದ್ರತೀರ್ಥರು , ಎಚ್.ವಿ.ರಾಜೀವ್, ಕಬ್ಬಿನಾಲೆ ವಸಂತ ಭಾರದ್ವಾಜ್ ಇತರರಿದ್ದರು.

 
 
 
 
 
 
 
 
 
 
 

Leave a Reply