ಪಿಪಿಸಿಯಲ್ಲಿ ವಿದ್ಯಾರ್ಥಿನಿಯ ಕೃತಿ ಅನಾವರಣ

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ಆಯೋಜನೆಯಲ್ಲಿ ಐಕ್ಯುಎಸಿ, ಸಾಂಸ್ಕೃತಿಕ ಸಂಘ ಹಾಗೂ ವಾಣಿಜ್ಯಶಾಸ್ತç ವಿಭಾಗದ ಸಹಯೋಗದೊಂದಿಗೆ ಸಂಸ್ಥೆಯ ಪೂರ್ವವಿದ್ಯಾರ್ಥಿನಿ ಕು. ಭಾವನಾ ಡಿ.ವಿ. ರಚಿಸಿದ ‘ಚಿಂತನ’ ಕೃತಿಯ ಅನಾವರಣ ಕರ‍್ಯಕ್ರಮ ಸಂಪನ್ನಗೊAಡಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆಯಲ್ಲಿ ಬರವಣಿಗೆ ಕೌಶಲ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿನಿಯ ಕೃತಿ ರಚನೆಯ ಕೆಲಸ ಅಭಿನಂದನಾರ್ಹ. ಎಲ್ಲ ವಿದ್ಯಾರ್ಥಿಗಳೂ ಇಂತಹ ಪ್ರಯತ್ನದಲ್ಲಿ
ತೊಡಗಿಸಿಕೊಳ್ಳುವಂತಾಗಲಿ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ ಕೃತಿಯನ್ನು ಪರಿಚಯಿಸುತ್ತ, ಈ ಕೃತಿಯ ಮೊದಲ ಭಾಗದಲ್ಲಿ ಭಾರತೀಯ ಪರಂಪರೆ, ಭಾಷೆ, ಸಂಸ್ಕೃತಿ, ವಿಶೇಷ ಚೇತನರ ಬಗೆಗಿನ ಪ್ರಬಂಧಗಳಿದ್ದು, ಎರಡನೆಯ ಭಾಗದಲ್ಲಿ ಅನೇಕ ಅಮೂಲ್ಯ ಔಷಧೀಯ ಸಸ್ಯಗಳ ಮಹತ್ತ÷್ವವನ್ನು ಸಾರುವ ಲೇಖನಗಳಿವೆ. ಇದು ಎಲ್ಲ ಬಗೆಯ ಓದುಗರಿಗೂ ಹತ್ತಿರವಾಗುವ ಪುಟ್ಟ
ಪುಸ್ತಕವಾಗಿದೆ ಎಂದರು. ಕರ‍್ಯಕ್ರಮದಲ್ಲಿ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥ
ಶಿವಕುಮಾರ ಪಿ.ಟಿ. ಹಾಗೂ ಐಕ್ಯುಎಸಿ ಸಂಯೋಜಕ ಡಾ. ವಿನಯ್ ಕುಮಾರ್
ಉಪಸ್ಥಿತರಿದ್ದರು. ಕರ‍್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗದ ಶಿವಕುಮಾರ ಅಳಗೋಡು ಸ್ವಾಗತಿಸಿದರು. ವಿದ್ಯಾರ್ಥಿನಿ ಪಿ.ಜಿ. ಪನ್ನಗಾ ರಾವ್ ನಿರೂಪಿಸಿದರು. ಶಾಂತಿಕಾ ಉಪಾಧ್ಯ ಪ್ರಾರ್ಥಿಸಿ, ಹರ್ಷಿತಾ ಉಡುಪ
ವಂದಿಸಿದರು.
 
 
 
 
 
 
 
 
 
 
 

Leave a Reply