ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಷ್ಟೋತ್ತರ ಶತ ನಾಳಿಕೇರ ಗಣಯಾಗ ಸಂಪನ್ನ

ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪ್ರಸನ್ನ ಗಣಪತಿಯ ಸನ್ನಿಧಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಅಷ್ಟೋತ್ತರ ಶತ ನಾಳಿಕೇರ ಗಣಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗ ದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಋುತ್ವಿಜರ ಸಹಕಾರದೊಂದಿಗೆ ಭಕ್ತರ ಸಮಕ್ಷಮದಲ್ಲಿ ಸಂಪನ್ನ ಗೊಂಡಿತು.ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಗಣೇಶ ಚತುರ್ಥಿಯಂದು ನೂರ ಎಂಟು ತೆಂಗಿನ ಗಣಯಾಗ ಹಾಗೂ ಮೂಡುಗಣಪತಿ ಸೇವೆ ಸೇವಾ ರೂಪ ಕ್ಷೇತ್ರಕ್ಕೆ ಸಮರ್ಪಿತ ವಾಗುತ್ತಿದೆ.  ಮಧ್ಯಾಹ್ನ ಮಹಾಪೂಜೆ ಹಾಗೂ ಸಂಜೆ ರಂಗಪೂಜೆಾ ಮಹೋತ್ಸವ ನೆರವೇರಿತು. ಆ ಪ್ರಯುಕ್ತ ವಿವಿಧ ಆರಾಧನೆಗಳು ನೆರವೇರಿದವು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

 
 
 
 
 
 
 

Leave a Reply