ವ್ಯಕ್ತಿಗಿಂತ ಭಕ್ತಿ ದೊಡ್ಡದು- ಪೇಜಾವರ ಶ್ರೀ ಉಡುಪಿ

ದೇವರ ಭಕ್ತಿಗಿಂತ ವ್ಯಕ್ತಿ ದೊಡ್ಡವನಲ್ಲ, ಭಗವಂತನಿಗೆ ನಗನಾಣ್ಯ, ವೈಭವೀಕರಣ ಬೇಕಾಗಿಲ್ಲ, ಅವರಿಗೆ ಭಕ್ತರ ಭಕ್ತಿ ಮುಖ್ಯ. ಆದರೇ ಭಕ್ತರಿಗೆ ಭಕ್ತಿಯನ್ನು ಸಲ್ಲಿಸುವುದಕ್ಕೆ ಸ್ವಚ್ಛವಾದ ಚೆಂದದ ಗುಡಿಗೋಪುರ ಬೇಕಾಗುತ್ತವೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಅವರು ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಸಂದರ್ಭದಲ್ಲಿ, ಜೀರ್ಣೋದ್ದಾರ ಸಮಿತಿ ವತಿಯಿಂದ ನಡೆಸಲಾದ ತುಲಾಭಾರ ಸೇವೆಯನ್ನು ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ 108 ಕಾಯಿ ಗಣಹೋಮ, ಮೃತ್ಯುಂಜಯ ಹೋಮ, ಶತರುದ್ರಾಭಿಷೇಕ, ಐಕ್ಯಮತ್ಯ ಹೋಮ, ಕೊಪ್ಪರಿಗೆ ಅಪ್ಪ ಸೇವೆ, ಅನ್ನಸಂತರ್ಪಣೆ ನಡೆಸಲಾಯಿತು. ರಾತ್ರಿ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ಭಟ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆರ್ಗ ಹರಿಪ್ರಸಾದ ಭಟ್ ಅವರಿಂದ ಪ್ರವಚನ ನಡೆಯಿತು. ದೇವಸ್ಥಾನದ ತಂತ್ರಿ ಮಧುಸೂದನ ತಂತ್ರಿ, ವ್ಯವಸ್ಥಾಪಕ ಸುರೇಶ್ ತಂತ್ರಿ, ಪೇಜಾವರ ಮಠದ ದಿವಾಣರಾದ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಶೀಶ ನಾಯಕ್ ಪೆರ್ಣಂಕಿಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಸದಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply