ಮೇರಿ ಮಿಟ್ಟಿ ಮೇರಾ ದೇಶ್ ” ಕಲ್ಪನೆಯಡಿ ನಮ್ಮೂರಿನ ಪೋಲೀಸು ಠಾಣೆಗೆ ಭೇಟಿ

ಸ್ವಸ್ಥ ಸಮಾಜದ ನಿರ್ಮಾಣದ ಗುರುತರ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಪೋಲೀಸು ಇಲಾಖೆಗೆ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯ _ಸವಿತಾ ಎರ್ಮಾಳ್, ಎನ್ ಎಸ್ ಎಸ್ ವಿಭಾಗಾಧಿಕಾರಿ, ಮಂಗಳೂರು ವಿಭಾಗ

ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ಕಾರ್ಯ ಕ್ರಮಾಧಿಕಾರಿಯಾದ ಶ್ರೀಮತಿ ಸವಿತಾ ಎರ್ಮಾಳ್ ಇವರ ಮಾರ್ಗ ದರ್ಶನದಲ್ಲಿ ಬ್ರಹ್ಮಾವರದ ಪೋಲೀಸು ಠಾಣೆಗೆ ಜಾಥಾ ಮೂಲಕ ಸಾಗಿ ಪೋಲೀಸು ಠಾಣೆಯ ಸಂಪೂರ್ಣ ಮಾಹಿತಿ ಪಡೆದರು.

ಠಾಣೆಯ ವ್ಯಾಪ್ತಿ, ಚಟುವಟಿಕೆಗಳು, ಕಾರ್ಯವೈಖರಿ, ಸಿಬ್ಬಂದಿಗಳು, ವಾಕಿಟಾಕಿ, FIR, ಸೆಲ್ ಗಳು, ವೆಪನ್ಗಳು ಪ್ರತೀ ವಿಷಯದ ಬಗ್ಗೆ PSI ಪುಷ್ಪ ಮತ್ತು PSI ರಾಜಶೇಖರ ವಂದಲಿ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಸಂದೇಹ ಮತ್ತು ಪ್ರಶ್ನೆಗಳಿಗೆ ಸ್ಪಷ್ಟ ಸಮಜಾಯಿಸಿ ನೀಡಿದ ಠಾಣಾಧಿಕಾರಿ ಗಳು ಪೋಲೀಸರೆಂದರೆ ಭಯ ಬೇಡ. ಸಮಾಜದ ಹಿತಕ್ಕಾಗಿ ಮಾಡುವ ಯಾವುದೇ ಕೆಲಸಗಳಿಗೆ ಪೋಲೀಸರು ಸದಾ ಅವಕಾಶ ನೀಡುವರು. ಸಿನೇಮಾದಲ್ಲಿ ತೋರಿಸುವ ಪೋಲೀಸರು ಅಸಲಿಯಲ್ಲ.

ಸಿನೇಮಾಗಳಲ್ಲಿ ಮನರಂಜನೆಗಾಗಿ ಕೈಲಾಗದ ಪೋಲೀಸರೆಂಬಂತೆ ಬಿಂಬಿ ಸುವುದು ಶೋಚನೀಯ ಎಂದರು. PSI ಪುಷ್ಪ ಮಾತನಾಡಿ ತಪ್ಪುಗಳು ನಿಮ್ಮ ಗಮನಕ್ಕೆ ಬಂದಾಗ ಹಿಂಜರಿಕೆ ಮಾಡದೆ, ಭಯಪಡದೆ ಠಾಣೆಯ ಗಮನಕ್ಕೆ ತನ್ನಿ. ಅದರಿಂದ ಮುಂದೆ ಸಂಭವಿಸಬಹುದಾದ ದುರಂತವನ್ನು ತಪ್ಪಿಸಬಹುದಾಗಿದೆ ಎಂದರು.

ವಿದ್ಯಾರ್ಥಿ ಜೀವನವು ವ್ಯಕ್ತಿಯ ಜೀವನದ ಸುವರ್ಣಯುಗವಾಗಿದ್ದು ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದೆಂದು ಸುರೇಶ್ ಸಲಹೆ ನೀಡಿದರು. ಠಾಣೆಯ ವ್ಯವಸ್ಥೆಗಳನ್ನು ಸ್ವಯಂಸೇವಕರಿಗೆ ತೋರಿಸಿ, ವೆಪನ್ ಗಳ ಬಳಕೆ ಹೇಗೆ ಎಲ್ಲಿ, ವಯರ್ಲೆಸ್ ಬಳಕೆ ಹೇಗೆ ಯಾಕೆ , ವಾಕಿಟಾಕಿ ಎಂದರೇನು ಇವರಲ್ಲವುಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ವಿಭಾಗದ ಎನ್ ಎಸ್ ಎಸ್ ವಿಭಾಗಾಧಿಕಾರಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರದ ಕಾರ್ಯ ಕ್ರಮಾಧಿಕಾರಿಯಾದ ಶ್ರೀಮತಿ ಸವಿತಾ ಎರ್ಮಾಳ್ ಮಾತನಾಡಿ ನಾವಿರುವ ಮಣ್ಣು ಪವಿತ್ರವಾಗಿರಿಸುವುದು ನಮ್ಮ ಹೊಣೆಗಾರಿಕೆ.

ಈ ನಿಟ್ಟಿನಲ್ಲಿ ಇಲಾಖೆಯ ಜತೆ ಸಹಕರಿಸುವ ಹೊಣೆಗಾರಿಕೆಯಿದ್ದಾಗ ನಮ್ಮಿಂದ ತಪ್ಪು ಗಳಾಗದು. ಸಾಮಾಜಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾದ್ದು ಇಂದಿನ ಅಗತ್ಯತೆ ಎಂದರು.

” ಮೇರಿ ಮಿಟ್ಟಿ ಮೇರಾ ದೇಶ್ ” ಕಲ್ಪನೆಯಡಿ ನಮ್ಮೂರಿನ ಪೋಲೀಸು ಠಾಣೆಗೆ ಭೇಟಿ ಮಾಡಲು ಅವಕಾಶ ನೀಡಿ, ಮಾಹಿತಿ ನೀಡಿರುವ ಅಧಿಕಾರಿ ಸಿಬ್ಬಂದಿ ವರ್ಗ ದವರನ್ನು ವಂದಿಸಿದರು. ಈ ಸಂದರ್ಭದಲ್ಲಿ PSI ರಾಜಶೇಖರ ವಂದಲಿ, PSI ಪುಷ್ಪಾ, ಸುರೇಶ್ , ದಿಲೀಪ್ , ಜಯಶ್ರೀ , ಶಾಂತ ರಾಜ್ ಮತ್ತಿತರ ಸಿಬ್ಬಂದಿಗಳು ಉಪ ಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಲ್ಲಿ ಸಹಕರಿಸಿದರು.

ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರದಿಂದಿ ಬ್ರಹ್ಮಾವರ ಪೋಲೀಸು ಠಾಣೆವರೆಗೆ ಜಾಥಾ ಮೂಲಕ ತೆರಳಿ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಅರಿಯಲಾಯಿತು.

 
 
 
 
 
 
 
 
 
 
 

Leave a Reply