ಕೊವಿಡ್​-19 ಬಗ್ಗೆ ಅರಿವು ಮೂಡಿಸುವ ದುರ್ಗಾ ಮಾತಾ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ದೊಡ್ಡ ಹಬ್ಬ. ಆದರೆ ಈ ಬಾರಿ ಕೊವಿಡ್​-19 ಇರುವುದರಿಂದ ಅದ್ದೂರಿ ಆಚರ ಣೆಗೆ ಕಡಿವಾಣ ಬೀಳುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಿರುವಾಗ ಕೋಲ್ಕತ್ತದ ದುರ್ಗಾ ಪೂಜಾ ಕ್ಲಬ್​ ದುರ್ಗಾ ದೇವಿಯ ದೊಡ್ಡ ಮೂರ್ತಿಯನ್ನು ಅನಾವರಣಗೊಳಿಸಿದೆ. ಇದೊಂದು ವಿಭಿನ್ನ ಪ್ರತಿಮೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಕೊವಿಡ್​-19 ಬಗ್ಗೆ ಅರಿವು ಮೂಡಿಸುವ ಸಲುವಾಗಿ ದುರ್ಗಾ ಮಾತಾ ಮೂರ್ತಿಗೆ ಬೆಳ್ಳಿಯ ಮಾಸ್ಕ್​ ತೊಡಿಸಲಾಗಿದ್ದು. ಹಾಗೇ ದೇವಿಯ 10 ಕೈಯಿಗಳಲ್ಲೂ ಸ್ಯಾನಿಟೈಸರ್​ ಬಾಟಲಿಯನ್ನೂ ಇಡಲಾಗಿದೆ.  ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ 27,299 ಸಕ್ರಿಯ ಕರೊನಾ ಪ್ರಕರಣ ಗಳು ಇವೆ. ಇದೇ ಕಾರಣಕ್ಕೆ ಅಲ್ಲಿ ದುರ್ಗಾ ಪೂಜೆ ಆಚರಣೆಗಳೂ ವಿಳಂಬವಾಗುತ್ತಿದೆ. ಇದೆಲ್ಲದರ ಮಧ್ಯೆ ಈ ದುರ್ಗಾ ದೇವಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply