ನಾರಾಯಣ ಗುರುಗಳ ಆದರ್ಶ ಚಿಂತನೆಗಳು ಅರ್ಥಪೂರ್ಣವಾದದ್ದು: ವಿ.ಸುನೀಲ್ ಕುಮಾರ್

ಉಡುಪಿ: ರಾಜ್ಯಮಟ್ಟದಲ್ಲಿ ನಾರಾಯಣ ಗುರುಗಳ ಜಯಂತಿಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ನಾರಾಯಣ ಗುರುಗಳ ಆದರ್ಶ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.

ಅವರು ಇಂದು ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜಿಲ್ಲಾಡಳಿತ, ಬಿಲ್ಲವ ಸೇವಾ ಸಂಘ ಇವರ ಸಂಯುಕ್ತಾಶ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಬಾರಿಯ 75 ನೇ ಸ್ವಾತಂತ್ರ್ಯೋತ್ಸವದ  ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಪ್ರಗತಿ, ಕ್ರಾಂತಿಕಾರಿ ಬದಲಾವಣೆಯನ್ನು ಕಂಡಿದ್ದರೂ ಸಹ ಸಮಾಜದಲ್ಲಿ ಇನ್ನೂ ಮೇಲು ಕೀಳು ಭಾವನೆ, ಜಾತಿಯ ಸಂಘರ್ಷಗಳು, ಅಸಮಾನೆತೆಯ ಧ್ವನಿ ಇಂದಿಗೂ ಈ ಸಮಾಜದಲ್ಲಿ ಕಂಡು ಬರುತ್ತಿದೆ ಎಂದರು.

ಅಂದು ನಾರಾಯಣ ಗುರುಗಳು ತಮ್ಮ ಕೀಳರಿಮೆ ಭಾವನೆಗಳನ್ನು ಹೋಗಲಾಡಿಸುವ ಸಲುವಾಗಿ ಅವರ ಬೋಧನೆಗಳನ್ನು ನಡವಳಿಕೆಗಳ ಮುಖಾಂತರ ಸಮಾಜಕ್ಕೆ ಮಾದರಿಯಾಗಿದ್ದರು. ಅದೇ ರೀತಿಯ ಭಾವನೆಗಳು ಇಂದು ಸಮಾಜದಲ್ಲಿ ಒಗ್ಗೂಡಿಸುವಂತಹ ಪ್ರಯತ್ನ ಮಾಡಬೇಕಗಿದೆ ಎಂದರು.

ಆರ್ಥಿಕವಾಗಿ ಸಮುದಾಯದ ಜನರನ್ನು ಬಲಹಿತರನ್ನಾಗಿ ಮಾಡುವಂತಹ ನಿಟ್ಟಿನಲ್ಲಿ ನಾರಾಯಣ ಗುರು ಹೆಸರಿನಲ್ಲಿ ನಿಗಮವನ್ನು ಮಾಡುವ ಸರ್ಕಾರದ ಚಿಂತನೆಯಿದ್ದು ಮುಂದಿನ ದಿನಗಳಲ್ಲಿ ಅತೀ ಶೀಘ್ರದಲ್ಲಿ ಈ ಯೋಜನೆಯನ್ನು ಮಾಡುತ್ತವೆ ಎಂದು ಹೇಳಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಮಾತನಾಡಿ, ಶತಮಾನಗಳ ಹಿಂದೆ ಸಾಮಾಜಿಕ ತುಡಿತಕ್ಕೆ ಒಳಗಾದ ಸಮಾಜದಲ್ಲಿನ ಜನರನ್ನು, ಅಸ್ಪ್ರಶ್ಯತೆ ಒಳಗಾದವರನ್ನು ಮುಖ್ಯವಾಹಿನಿಗೆ ಒಗ್ಗೂಡಿಸಿ ಕರೆತರುವಂತಹ ಪ್ರಯತ್ನ ಪಟ್ಟವರು ನಾರಾಯಣ ಗುರುಗಳು ಎಂದರು.

ನಾರಾಯಣಗುರುಗಳು ಇಡೀ ದೇಶದಲ್ಲಿ ತನ್ನದೇ ಆದ ಚಳುವಳಿ, ಜನಪರ ನಿರ್ವಹಣೆಯ, ಸಾಮಾಜಿಕ ನ್ಯಾಯ, ಅಸ್ಪ್ರಶ್ಯತೆ ನಿರ್ವಹಣೆಯ ಮೂಲಕ ಕೆಳಮಟ್ಟದ ವರ್ಗವನ್ನು ಎತ್ತಿ ಹಿಡಿದು ಸಮಾಜದ ಮುಖ್ಯವಾಹಿಸಿ ತಂದವರು ನಾರಾಯಣ ಗುರುಗಳು. ಸಕಾರದ ಮೂಲಕ ಮೂಲಭೂತ ಸೌಕರ‍್ಯ, ಕುಡಿಯುವ ನೀರು, ಬಡವನಿಗೆ ಸೂರು ಕೊಡಲು ಯಾವುದಾದರೊಂದು ಇಲಾಖೆ ಇದೆ ಎಂದರೆ ಅದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣದ ವತಿಯಿಂದ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ರಘುಪತಿ ಭಟ್ ಮಾತನಾಡಿ ನಾರಾಯಾಣ ಗುರುಗಳ ಹೆಸರಿನಲ್ಲಿ ನಿಗಮ ಆದರೆ ಹೆಚ್ಚು ಹೆಚ್ಚು ಕಾರ್ಯಕ್ರಗಳನ್ನು ಮಾಡಿ ಸಮುದಾಯವನ್ನು ಗುರುತಿಸಲು ಸಾಧ್ಯವಾಗುತ್ತದೆ. ನಾರಾಯಣಗುರು ಗಳ ಎಲ್ಲಾರನ್ನು ಸಮನಾಗಿ ಕಂಡಿದ್ದು ಅವರ ಮೇಲೆ ಭಕ್ತಿ ಶ್ರದ್ಧೆ ಇಟ್ಟುಕೊಂಡು ಅವರ ಆದರ್ಶ ಮಾತುಗಳನ್ನು ಜೀವನದಲ್ಲಿ ಅನುಸರಿಸಬೇಕು ಎಂದರು.

ಮುoದಿನ ಜನಾಂಗದ ವಿಧ್ಯಾರ್ಥಿಗಳಿಗೆ ನಾರಾಯಣ ಗುರುಗಳ ಜೀವನ ಚರಿತ್ರೆಯ ಕುರಿತಂತಹ ವಿಷಯಗಳು ವಿದ್ಯಾರ್ಥಿಗಳ ಪಠ್ಯದಲ್ಲಿ ಬರುವಂತಹ ಪ್ರಯತ್ನ ಮಾಡಬೇಕಾಗಿದೆ ಎಂದರು. ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಾತನಾಡಿ ನಾರಾಯಣಗುರು ಜೀವನ ಚರಿತ್ರೆ ಯ ಕುರಿತು ಉಪನ್ಯಾಸ ನೀಡಿದರು.

ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ , ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಪೋಲಿಸ್ ಅಧೀಕ್ಷಕ ಎನ್ ವಿಷ್ಣುವರ್ಧನ್, ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ರೋಶನ್ ಕುಮಾರ್ ನೀರೂಪಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಕುಮಾರ್ ಬೆಕ್ಕೆರಿ ವಂದಿಸಿದರು.

 
 
 
 
 
 
 
 
 
 
 

Leave a Reply