ಉಡುಪಿ: ಶಾಸಕ ರಘುಪತಿ ಭಟ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ 

ಉಡುಪಿ: ಉಡುಪಿಯಲ್ಲಿ ಗಣ್ಯರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳಿಸುವುದು, ಹಣಕ್ಕೆ ಬೇಡಿಕೆ ಇಡುವುದು ಮುಂದುವರೆದಿದೆ. ಇದೀಗ ಶಾಸಕ ರಘುಪತಿ ಭಟ್ ಸರದಿ.  ಅವರ ನಕಲಿ Fb ಖಾತೆ ತೆರೆಯಲಾಗಿದ್ದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಲಾಗಿದೆ.
ಈ ಬಗ್ಗೆ ಕರಾವಳಿಯಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿರುವ ಶಾಸಕರು, “ನನ್ನ ಹೆಸರಿನಲ್ಲಿ ನಕಲಿ Facebook ಖಾತೆ (Mala K Raghupathi Bhat) ಯನ್ನು ತೆರೆದು Friend Request ಕಳುಹಿಸಿರುವ ಬಗ್ಗೆ ಮಾಹಿತಿ ಬಂದಿರುತ್ತದೆ. ಈ ಹೆಸರಿನಿಂದ ಯಾವುದೇ Request ಅಥವಾ ಸಂದೇಶಗಳು ಬಂದಲ್ಲಿ ಪ್ರತಿಕ್ರಿಯಿಸಬೇಡಿ” ಎಂದು ವಿನಂತಿ ಮಾಡಿದ್ದಾರೆ. 
ಗಣ್ಯವ್ಯಕ್ತಿಗಳ ನಕಲಿ ಫೇಸ್ ಬುಕ್ ಖಾತೆ ತೆಗೆದು ಅಪರಾಧವೆಸಗುತ್ತಿರುವ ಕಾಣದ ಕೈಗಳಿಗೆ ಪೊಲೀಸ್ ಇಲಾಖೆ ಬೇಡಿ ತೊಡಿಸುವುದು ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿತ್ತಿದೆ.  
 
 
 
 
 
 
 
 
 
 
 

Leave a Reply