​​ಮೋಡರ್ನ್ ಸ್ಟೂಡಿಯೋದ ಮಾಲಕ ಅರುಣ್ ಎಂ. ಶಿರಾಲಿಯವರಿಗೊಂದು ಅಕ್ಷರ ನಮನ ~ಜನಾರ್ದನ್ ಕೊಡವೂರು  

ನಿಧನ : 19.07.2021- ಬೆಳಿಗ್ಗೆ ಗಂಟೆ 6.30ಕ್ಕೆ
ಅರುಣ್ ಎಂ. ಶಿರಾಲಿ​(74)ಯವರು ಸುಮಾರು 50 ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಸೇವೆಯನ್ನು  ಸಲ್ಲಿಸುತ್ತಿದ್ದಾರೆ. ಅಂದಿನ ಕಾಲದಲ್ಲಿ ಜೆಜೆ ಸ್ಕೊಲ್ ಆಫ್ ಆರ್ಟ್ಸ್ನಲ್ಲಿ ಡಿಪ್ಲೋಮ ಪದವೀಧರರಾಗಿದ್ದ ಮಂಗೇಶ್ ಶಿರಾಲಿ ಹಾಗು ಮಿತ್ರಾ ಶಿರಾಲಿ ದಂಪತಿಗಳ ಪುತ್ರರಾಗಿರುವ ಶ್ರೀಯುತರು ತಂದೆಯ ಗರಡಿಯಲ್ಲಿಯೇ ಪಳಗಿದವರು. 
ಸುಮಾರು 30 ವರ್ಷಗಳ ಕಾಲ ಕಪ್ಪು-ಬಿಳುಪು ಛಾಯಾಗ್ರಹಣದಲ್ಲಿ ತನ್ನನ್ನು ತೊಡಗಿಸಿಕೊಂಡು ಈಗಿನ ವರ್ಣ ಚಿತ್ರಗಳ ಯುಗದಲ್ಲೂ ಸೈ ಎನಿಸಿಕೊಂಡವರು. ಮಣಿಪಾಲದ ಮಾಧವ ಪೈಯವರು ಹಾಗು ಕೇಂದ್ರ ರೈಲ್ವೆ ಸಚಿವರಾಗಿದ್ದ ಟಿ.ಎ.ಪೈ ಯವರ ಅಚ್ಚುಮೆಚ್ಚಿನ ಛಾಯಾಗ್ರಾಹಕರಾಗಿದ್ದ ಶಿರಾಲಿಯವರಿಗೆ ಅಷ್ಟಮಠಗಳ ನಿಕಟ ಸಂಪರ್ಕವಿತ್ತು.
 ಮಲ್ಪೆಯ ಬೋಟ್ ದುರಂತದ ಚಿತ್ರಗಳನ್ನು ತನ್ನ ಕ್ಯಾಮಾರದಲ್ಲಿ ಸೆರೆಹಿಡಿದಿರುವ ಇವರು ನಾಡಿನ ವಿವಿದ ಪತ್ರಿಕೆಗಳಿಗೂ ಛಾಯಾಚಿತ್ರ ಪರ‍್ಯೆಸುತ್ತಿದ್ದರು.​  ಸುಮಾರು 30 ಜನ ಶಿಷ್ಯವೃಂದವನ್ನು  ಹೊಂದಿರುವ ಮೋಡರ್ನ್ ಸ್ಟೂಡಿಯೋಕ್ಕೆ 100 ವರ್ಷಗಳ ಇತಿಹಾಸವಿದೆ. 
ವಿಜಯ ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿ ಗೀತಾ, ​ಸುಪುತ್ರ ಮೇಜರ್ ಆನಂದ್ ಶಿರಾಲಿ, ಸೊಸೆ ವರ್ಷಾ ಹಾಗು ಮಗಳು ಕೃಪಾ, ಅಳಿಯ ಸಂತೋಷ್, ಮೊಮ್ಮಗಳು ಅನುಷಾ ರವರ ಪರಿಪೂರ್ಣ ಕುಟುಂಬ ಇವರ​ದ್ದಾಗಿತ್ತು. ಅಸಂಖ್ಯಾತ ಬಂಧು ಬಳಗದವರನ್ನು, ಮಿತ್ರರನ್ನು ಅಗಲಿದ್ದಾರೆ. ನನ್ನಂತಹ ಅನೇಕ ಛಾಯಾಚಿತ್ರಗ್ರಾಹಕರಿಗೆ ಮಾರ್ಗದರ್ಶಕರಾಗಿದ್ದರು. ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ  ಬಳಿ ಇರುವ ಶಂಕರನಾರಾಯಣ ದೇವಳದ ಜೀರ್ಣೋದ್ಧಾರದಲ್ಲಿ ತನ್ನನ್ನು ವಿಶೇಷವಾಗಿ ತೊಡಗಿಸಿಕೊಂಡಿದ್ದರು.      
ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಛಾಯಾಗ್ರಹಣ ದಿನಾಚರಣೆಯಂದು ಕೊಡಮಾಡುವ ಉಪ್ಪಾ  !ಛಾಯಾ ಸ್ಪೂರ್ತಿ! ಪ್ರಶಸ್ತಿ ಗೆ ಭಾಜನರಾಗಿದ್ದರು. 
ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, skpa ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಛಾಯಾಗ್ರಾಹಕ ಆಸ್ಟ್ರೋ ಮೋಹನ್, skpa  ಉಡುಪಿ ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್, ​ವಿಶ್ರಾಂತ ಉಪನ್ಯಾಸಕ ಕುದಿ ವಸಂತ ಶೆಟ್ಟಿ ​ ​ಶಿರಾಲಿಯವರ ನಿಧನಕ್ಕೆ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ. 

 ​

 
 
 
 
 
 
 
 
 
 
 

Leave a Reply