ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ: ನಗರದ ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಡಿ.31 ರಿಂದ ಜ.08 ರ ವರೆಗೆ ಹಮ್ಮಿಕೊಂಡಿರುವ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶನಿವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಈ ಪ್ರದರ್ಶನದಲ್ಲಿ ಟೆಂಪಲ್ ಸಂಗ್ರಹವನ್ನು ಇಲಾ ಕಿರಣ್ ಶೆಟ್ಟಿ,ಮೈನ್ ಡೈಮಂಡ್ಸ್ ನ್ನು ವೈಷ್ಣವಿ ಕೊಡವೂರು,ಜೆಮ್ಸ್ ಸ್ಟೋನ್ ಸಂಗ್ರಹವನ್ನು ನೊಲಿಟ ಸಲ್ಡಾನ ಪ್ರದರ್ಶನದಲ್ಲಿ ಅನಾವರಣಗೊಳಿಸಿದರು.

ಇಲಾ ಕಿರಣ್ ಶೆಟ್ಟಿ ಮಾತನಾಡಿ ಚಿನ್ನಾಭರಣಗಳು ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ತಿಳಿಸಿದರು.

    ನೊಲಿಟ ಸಲ್ಡಾನ ಮಾತನಾಡಿ ವ್ಯಾಪಾರದ ಜೊತೆಗೆ ಸಾಮಾಜಿಕ ಕಳಕಳಿಯ ಬಗ್ಗೆ, ವೈಷ್ಣವಿ ಕೊಡವೂರ್ ಆರ್ಟಿಸ್ಟ್ರಿಯ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ವಿಶೇಷ ಆಕರ್ಷಣೆಯಾಗಿ ಸ್ವಾತಿ ಕುಲಾಲ್,ಪವಿತ್ರ ಶೆಣೈ ರಾಂಪ್ ವಾಕ್ ಮೂಲಕ ಮನರಂಜಿಸಿದರು.

ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ, ಮುಸ್ತಫಾ ಉಪಸ್ಥಿತರಿದ್ದರು. ಸಂದೇಶ್ ಪೆರ್ಡೂರು ಸ್ವಾಗತಿಸಿ, ವಿಘ್ನೇಶ್ ವಂದಿಸಿದರು.

ಮೈನ್‍ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿದ್ದು, `ಡಿವೈನ್‍ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿದೆ. `ಪ್ರಿಶಾ’ ದಲ್ಲಿ ರುಬಿ, ಎಮರಾಲ್ದ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು, ಎಥಿನಿಕ್ಸ್ ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ. `ಎರ’ ಅನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ, ವಿಶೇಷ ಕೊಡುಗೆಯಾಗಿ ಚಿನ್ನದ ಮೇಲೆ ಫೇರ್ ಪ್ರೈಸ್,ವಜ್ರದ ಮೇಲೆ ಶೇ.25 ರವರೆಗೆ ಕಡಿತವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರು,ಗ್ರಾಹಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply