ಕೋಳಿ ಅಂಕದ ಕಟ್ಟೆಯಾದ ಮದುವೆ ಮಂಟಪ

ಬ್ರಹ್ಮಾವರ: : ಮದುವೆ ಮಂಟಪದಲ್ಲಿಯೇ ವಧು ಹಾಗೂ ವರ ಕೋಳಿ ಅಂಕ ಆಡಿದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಮದುಮಕ್ಕಳು ಜೆಸಿಬಿಯಲ್ಲಿ ಕುಳಿತು ಮದುವೆ ಮಂಟಪಕ್ಕೆ ಆಗಮಿಸಿದ್ದಾರೆ. ಮದುವೆ  ದಿರಿಸಿನಲ್ಲಿ ಕಂಗೊಳಿಸುತ್ತಿದ್ದ ವಧು ವರರಾದ ಪೂಜಾ ಮತ್ತು ಮಿಥುನ್ ಕೋಳಿಗಳನ್ನು ಮದುವೆ ಮಂಟಪದಲ್ಲಿಯೇ ಕಾಳಗಕ್ಕೆ ಬಿಟ್ಟಿದ್ದಾರೆ.

ಕೋಳಿ ಅಂಕ: ತುಳುನಾಡಿನ ಜಾನಪದ ಆಟಗಳಲ್ಲಿ ಕೋಳಿಕಟ್ಟ ಮುಖ್ಯವಾಗಿದೆ. ಕೋಳಿಕಟ್ಟಕ್ಕೆ ಭೂತ ದೈವಗಳೇ ಅಧಾರ. ತುಳುನಾಡಿನಲ್ಲಿ ದೈವ ದೇವರುಗಳಿಗೆ ಅಂಕ ಆಯನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರೊಂದಿಗೆ ಕೋಳಿಕಟ್ಟ ಎಂಬ ಸ್ಪರ್ಧಾತ್ಮಕ ಆಟವೂ ನಡೆಯುತ್ತದೆ. ಊರಿನಲ್ಲಿ ಎಲ್ಲೆಲ್ಲಿ ಅಂಕ ಆಯನಗಳು ನಡೆಯುತ್ತಿವೆಯೋ ಅಲ್ಲಿ ಕೋಳಿಕಟ್ಟಗಳೂ ನಡೆಯುತ್ತಿವೆ.ಅಂಕ ಆಯನಗಳಿಗಿಂತ ಮೊದಲು ಕೋಳಿಕಟ್ಟ.
ಸಮಾಜಿಕ ಜಾಲತಾಣಗಳ ಈ ಜಮಾನದಲ್ಲಿ ಹೊಸ ಹೊಸ ಆವಿಸ್ಕಾರಗಳು ಹುಟ್ಟುವುದು.  ಮದುವೆ ಎಂಬ ಏಳೇಳು ಜನ್ಮದ ಪವಿತ್ರ ಬಾಂದವ್ಯ ಮುಂದಿನ ದಿನಗಳಲ್ಲಿ ಎಲ್ಲಿಗೆ ಬಂದು ಮುಟ್ಟುವುದೋ ಎಂಬುದು ಜನರ ಅಂಬೋಣ.
 
 
 
 
 
 
 
 
 
 
 

Leave a Reply