ಕೆ ಎಂ ಸಿ ಮಣಿಪಾಲದಿಂದ ಮಣಿಪಾಲ್ ಹಾಟ್ಸ್‌-ಹ್ಯಾಂಡ್ಸ್ ಆನ್ ಟ್ರೈನಿಂಗ್ ಸೆಷನ್ಸ್ – ಗ್ಲುಕೋಮಾ ಡಯಾಗ್ನೋಸ್ಟಿಕ್ಸ್” ಕುರಿತು ಯಶಸ್ವಿ ಕಾರ್ಯಾಗಾರ

ವಿಶ್ವ ಗ್ಲುಕೋಮಾ ಸಪ್ತಾಹ 2024 ರ ಸಂಭ್ರಮಾಚರಣೆಯಲ್ಲಿ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗವು ಮಾರ್ಚ್ 10 ರಂದು ‘ಮಣಿಪಾಲ್ ಹಾಟ್ಸ್: ಹ್ಯಾಂಡ್ಸ್ ಆನ್ ಟ್ರೈನಿಂಗ್ ಸೆಷನ್ಸ್ – ಗ್ಲುಕೋಮಾ ಡಯಾಗ್ನೋಸ್ಟಿಕ್ಸ್’ ಎಂಬ ಒಳನೋಟವುಳ್ಳ ಕಾರ್ಯಾಗಾರವನ್ನು ಆಯೋಜಿಸಿತ್ತು. ಉಡುಪಿ ಜಿಲ್ಲಾ ಆಪ್ತಾಲ್ಮಿಕ್ ಸೊಸೈಟಿಯ ಅಧ್ಯಕ್ಷರಾದ ಡಾ. ಶ್ರೀನಾಥ್ ಕಾಮತ್ ಅವರು ಉದ್ಘಾಟಿಸಿದ ಕಾರ್ಯಕ್ರಮವು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ರೋಗನಿರ್ಣಯದ ಕೌಶಲ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು.

ಸಂಸ್ಥೆಯ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಅವರ 125ನೇ ಜನ್ಮದಿನಾಚರಣೆಯ ಗೌರವಾರ್ಥವಾಗಿ ನಡೆದ ಕಾರ್ಯಾಗಾರವು ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸಮುದಾಯ ಸೇವೆಯ ಸುಧಾರಣೆಯ ಅವರ ತತ್ವಗಳಿಗೆ ಸಾಕ್ಷಿಯಾಗಿದೆ. ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕಾಮತ್, ಗ್ಲುಕೋಮಾದಂತಹ ನಿಶ್ಯಬ್ದ ಕುರುಡು ಕಾಯಿಲೆಗಳನ್ನು ಸಮಯೋಚಿತವಾಗಿ ಗುರುತಿಸಲು ಮತ್ತು ಸ್ನಾತಕೋತ್ತರ ಪದವೀಧರರ ರೋಗನಿರ್ಣಯದ ಕೌಶಲ್ಯವನ್ನು ಹೆಚ್ಚಿಸುವ ಮಹತ್ವವನ್ನು ಒತ್ತಿ ಹೇಳಿದರು. ಇದು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲದೆ ಒಟ್ಟಾರೆ ಸಮುದಾಯ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ ಎಂದು ಅವರು ಎತ್ತಿ ತೋರಿಸಿದರು.

ಈ ಸಂದರ್ಭದಲ್ಲಿ, ಸಹ ಪ್ರಾಧ್ಯಾಪಕರಾದ ಡಾ. ನೀತಾ ಕೆಐಆರ್, ಗ್ಲುಕೋಮಾದ ಜಾಗತಿಕ ಪ್ರಭಾವದ ಬಗ್ಗೆ ಗಮನ ಸೆಳೆದರು, ಇದು ಒಮ್ಮೆ ದೃಷ್ಟಿ ಕಳೆದುಕೊಂಡರೆ ಬದಲಾಯಿಸಲಾಗದ ಕುರುಡುತನದ ಪ್ರಮುಖ ಕಾರಣ ಎಂದು ಹೇಳಿದರು . ‘ಗ್ಲುಕೋಮಾ ಮುಕ್ತ ಜಗತ್ತಿಗೆ ಎಲ್ಲರೂ ಒಂದಾಗಬೇಕು’ ಎಂದು ಒತ್ತಾಯಿಸಿ ಸಾಮೂಹಿಕ ಕ್ರಮಕ್ಕೆ ಕರೆ ನೀಡಿದರು. ಈ ಸಂದರ್ಭ ಕರ್ನಾಟಕ ನೇತ್ರ ವಿಜ್ಞಾನ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ನೇತ್ರ ಸಂಸ್ಥೆಯ ಕಾರ್ಯದರ್ಶಿ ಡಾ.ವಿಕ್ರಂ ಜೈನ್ ಹಾಗೂ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಹಿರಿಯ ನೇತ್ರ ತಜ್ಞೆ ಡಾ.ಲಾವಣ್ಯ ರಾವ್ ಉಪಸ್ಥಿತರಿದ್ದರು.

ಉಡುಪಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಸ್ನಾತಕೋತ್ತರ ಪದವೀಧರರು ಮತ್ತು ನೇತ್ರ ಸಲಹೆಗಾರರನ್ನು ಒಳಗೊಂಡ 100 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಒಇಯು ಹಳೆ ವಿದ್ಯಾರ್ಥಿಗಳ ರೋಲಿಂಗ್ ಟ್ರೋಫಿ ಇಂಟರ್ ಕಾಲೇಜು ಸ್ನಾತಕೋತ್ತರ ವಿದ್ಯಾರ್ಥಿಗಳ ಚರ್ಚಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದ ಕಾಲೇಜುಗಳಿಂದ ಉತ್ಸಾಹದಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಂತಹ ಕಾರ್ಯಾಗಾರವು ಶೈಕ್ಷಣಿಕ ಮತ್ತು ಸಹಯೋಗದ ಜೊತೆಗೆ ಭಾಗವಹಿಸುವವರಲ್ಲಿ ಜ್ಞಾನ ವಿನಿಮಯವನ್ನು ಉತ್ತೇಜಿಸುತ್ತದೆ.

 
 
 
 
 
 
 
 
 
 
 

Leave a Reply