ಕೇರಳದ ಪ್ರಸಿದ್ಧ ಸೋಶಿಯಲ್​ ಮೀಡಿಯಾ ಸ್ಟಾರ್ ದುಬೈ ಫ್ಲ್ಯಾಟ್​ನಲ್ಲಿ ಶವವಾಗಿ ಪತ್ತೆ ​!​ 

ದುಬೈ: ಪ್ರಖ್ಯಾತ ವ್ಲಾಗರ್​ ಮತ್ತು ಮಲಯಾಳಂ ಆಲ್ಬಂ ಸ್ಟಾರ್​ ರಿಫಾ ಮೆಹ್ನು (21) ಅವರು ದುಬೈನಲ್ಲಿರುವ ತಮ್ಮ ಫ್ಲ್ಯಾಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ಕೇರಳದ ಕೊಯಿಕ್ಕೋಡ್​ ನಗರದ ಬಲುಸ್ಸೆರಿ ಮೂಲದ ರಿಫಾ, ದುಬೈನ ಜಫ್ಫಿಲಿಯಾದಲ್ಲಿರುವ ಫ್ಲ್ಯಾಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತಮ್ಮ ಪತಿ ಮೆಹ್ನೋವ್​ ಮತ್ತು ಮಗಳ ಜತೆ ದುಬೈನಲ್ಲಿ ನೆಲೆಸಿದ್ದರು. ಸಾವಿಗೆ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಿಫಾ ಅವರು ಆಹಾರ ಮತ್ತು ಫ್ಯಾಶನ್​ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದರು. ಕೇರಳದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ರಿಫಾ ಬಿಜಿಯಾಗಿರುತ್ತಿದ್ದರು. ಸಾವಿಗೂ ಕೆಲವು ಕ್ಷಣಗಳ ಹಿಂದೆಯೂ ಆಕೆ ಜಾಲತಾಣದಲ್ಲಿ ಸಕ್ರೀಯರಾಗಿದ್ದರು. ರಿಫಾ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

ಯುಎಇಯ ಜನಪ್ರಿಯ ಹೋಟೆಲ್‌ನಲ್ಲಿ ರಿಫಾ ಮತ್ತು ಅವರ ಪತಿ ಆಹಾರವನ್ನು ತಿನ್ನುತ್ತಿರುವ ಅವರ ಕೊನೆಯ ವಿಡಿಯೋಗೆ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಹರಿದು ಬರುತ್ತಿವೆ. ರಿಫಾ ಕಳೆದುಕೊಂಡ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರ ಸಾವಿಗೆ ಕಾರಣ ಏನೆಂದು ತಿಳಿದುಬರಲಿದೆ.

 
 
 
 
 
 
 
 
 
 
 

Leave a Reply