ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾII ಆದಶ೯ ಹೆಬ್ಬಾರ್
ಡಾII.ಮಧುಮಯೂರಿ

ವೈದ್ಯೋ ನಾರಾಯಣ ಹರಿ: ಎಂಬ ಉಕ್ತಿಯಂತೆ ನಾವು ಇಂದು ವೈದ್ಯರ ಅಮೂಲ್ಯ ಜೀವ ಉಳಿಸುವ ಅಪೂವ೯ವಾ ಕಾಯ೯ಕ್ಕೆ ವೈದ್ಯರನ್ನು ದೇವರ ಸಾಲಿಗೆ ಸೇರಿಸುತ್ತೇವೆ ನಮ್ಮ ಸಮಾಜ ಹಲವಾರು ವೈದ್ಯರು ತಮ್ಮ ಅಮೂಲ್ಯವಾದ ಸೇವೆಯ ಮೂಲಕ ಮನೆಮಾತಾಗಿದ್ದಾರೆ.

ಕುಂದಾಪುರದ ಪ್ರಸಿದ್ದ ಆಸ್ಪತ್ರೆಗಳಲ್ಲಿ ಒಂದಾದ ಆದಶ೯ ಆಸ್ಪತ್ರೆಯ ಮುಖ್ಯಸ್ಥರಾದ ಡಾII ಆದಶ೯ ಹೆಬ್ಬಾರ್ ರವರು ತಮ್ಮ ವೈದ್ಯಕೀಯ ಶಿಕ್ಷಣ ವನ್ನು ಕೆ.ಎಂ.ಸಿ ಯಲ್ಲಿ ಪಡೆದು ನಂತರ ಎಂ.ಎಸ್ ಪದವಿಯನ್ನು ದೆಹಲಿಯಲ್ಲಿ ಪಡೆದಿರುತ್ತಾರೆ. ತಂದೆ ಕಲಾವಿದರು ಹಾಗೂ ಕಲಾ ಪೋಷಕರಾದ ವೈಕುಂಠ ಹೆಬ್ಬಾರ್ ಮತ್ತು ತಾಯಿ ಕುಂದಾಪುರದ ಪ್ರಸಿದ್ಧ ಸ್ತ್ರೀರೋಗ ತಜ್ಞರಾದ ಡಾII ಛಾಯಾ ಹೆಬ್ಬಾರ್ ರವರ ಪುತ್ರರಾಗಿ 2007 ರಿಂದ ಈ ಆಸ್ಪತ್ರೆಯ ಆಡಳಿತವನ್ನು ನಿವ೯ಹಿಸಿಕೊಂಡು ಬರುತ್ತಿದ್ದಾರೆ.

ಈ ಆಸ್ಪತ್ರೆ ಈ ಹಿಂದೆ 42 ವಷ೯ಗಳ ಕಾಲ ಕುಂದಾಪುರದ ನ್ಯಾಷನಲ್ ಹೈವೆಯ ಪಕ್ಕದಲ್ಲಿತ್ತು. ಇದೀಗ ಆದರ್ಶ ಆಸ್ಪತ್ರೆಯು ಸುಸಜ್ಜಿತವಾದ ವಿಶಾಲವಾದ ನೂತನ ಕಟ್ಟಡದಲ್ಲಿ ಕಳೆದ 5 ವಷ೯ಗಳಿಂದ ಕಾಯಾ೯ಚರಿಸುತ್ತಿದೆ.

ಡಾ|| ಮಧುಮಯೂರಿಯವರು ತನ್ನ ವೈದ್ಯಕೀಯ ಶಿಕ್ಷಣ ಎಂ.ಬಿ.ಬಿ.ಎಸ್ ನ್ನು ರಾಜಸ್ತಾನದ ಬಿಕನೇರ್ ನಲ್ಲಿ ಪಡೆದು ,
ಎಂ.ಡಿ ಪದವಿಯನ್ನು ದೆಹಲಿ ಯಲ್ಲಿ ಪೂರೈಸಿರುತ್ತಾರೆ. ಆಸ್ಪತ್ರೆಯ ಅಭಿವೃದ್ಧಿಯಲ್ಲಿ ಇವರ ಪಾತ್ರ ಕೂಡ ಅಪಾರವಾಗಿದೆ.

ಕಲೆ, ಸಾಹಿತ್ಯ, ಸೇವೆ :-
ಡಾ|| ಆದಶ೯ ಹೆಬ್ಬಾರ್ ರವರ ತಮ್ಮ ಅವಿನಾಶ್ ರವರು ಪ್ರಸಿದ್ಧ ಸೀತಾರ್ ವಾದಕರಾಗಿದ್ದರು. ಸಂಗೀತ ಭಾರತಿ ಸಂಸ್ಥೆಯ ಟ್ರಸ್ಟಿಯಾಗಿ ಹಿಂದೂಸ್ತಾನಿ, ಕನಾ೯ಟಿಕ್ ಸಂಗೀತದಲ್ಲಿ ಅಪೂವ೯ವಾದ ಸಾಧನೆ ಮಾಡಿದ್ದರು. ತನ್ನ ಸಹೋದರನ ಸಾಧನೆ ಯ ಹೆಜ್ಜೆಗೆ ಹೆಜ್ಜೆಯಾಗಿ ಸಂಪೂಣ೯ವಾದ ಬೆಂಬಲ ನೀಡಿ ಪ್ರಸಿದ್ದ ಕಲಾವಿದರನ್ನಾಗಿ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ.

ಯಕ್ಷಗಾನ ಕಲೆಯಲ್ಲಿ ವಿಶೇಷ ಪ್ರೀತಿಯಿರುವ ಇವರು ಯಕ್ಷ ಸೌರಭ ಸಂಸ್ಥೆ ನಡೆಸುವ ಯಕ್ಷಗಾನ ಕಾಯ೯ಕ್ರಮಕ್ಕೆ ಬೆಂಬಲ ದೊ೦ದಿಗೆ ಆಥಿ೯ಕ ಸಹಾಯ ನೀಡುತ್ತಾ ಬರುತ್ತಿದ್ದಾರೆ.

ಕುಂದಾಪುರದ ಸಮೀಪದಲ್ಲಿರುವ ವಿಶೇಷಚೇತನ ಮಕ್ಕಳ ಶಾಲೆಗೆ ತನ್ನದೇ ಆದ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಇವರ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ.

ಸಾಮಾಜಿಕ ಸೇವೆ: – ಭಾರತೀಯ ವೈದ್ಯ ಸಂಘ- ಕುಂದಾಪುರದ ಮಾಜಿ ಅಧ್ಯಕ್ಷ ರಾಗಿರುವ ಇವರು ತನ್ನ ಅಧ್ಯಕ್ಷತೆಯ ಸಮಯದಲ್ಲಿ ಐ.ಎಂ.ಎ ಯ ಮೂಲಕ ಅನೇಕ ಜನಪರ ಕಾಯ೯ಕ್ರಮ ಗಳನ್ನು ನಡೆಸಿ ಜನ ಮೆಚ್ಚುಗೆ ಪಡೆದಿದ್ದಾರೆ.
ಆಸ್ಪತ್ರೆಯಲ್ಲಿ ನಿರಂತರವಾಗಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬರುತ್ತಿದ್ದು, ಬಡ ಮತ್ತು ಆಥಿ೯ಕವಾಗಿ ಹಿಂದುಳಿದ ರೋಗಿಗಳಿಗೆ ವೆಚ್ಚದಲ್ಲಿ ಕಡಿತ ಹಾಗೂ ವಿವಿಧ ರೀತಿಯ ಜನಪರ ಸೇವೆ ಮಾಡುತ್ತಿದ್ದಾರೆ.
ರೋಟರಿ ಕುಂದಾಪುರದ ಸದಸ್ಯರಾಗಿ ಕೂಡ ಅನೇಕ ಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಆಸ್ಪತ್ರೆಯ ಆಡಳಿತದೊಂದಿಗೆ ಎಲ್ಲ ರೋಗಿಗಳ ಮೆಚ್ಚಿನ ವೈದ್ಯರಾಗಿ, ಸಿಬ್ಬಂದಿಗಳ ಮಾಗ೯ದಶ೯ಕರಾಗಿರುವ ಡಾ|| ಹೆಬ್ಬಾರ್ ದಂಪತಿಗಳ ಕಾಯ೯ಕ್ಕೆ ಒಂದು ಸಲಾಂ.

ಈ ವೈದ್ಯ ದಂಪತಿಯ ಸೇವೆ ಹೀಗೆಯೇ ಮುಂದುವರೆಯಲಿ ಎಂಬ ಆಶಯದೊಂದಿಗೆ
ಇವರ ಈ ಸೇವೆಗೆ ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

🖋️ ರಾಘವೇಂದ್ರ ಪ್ರಭು ಕರ್ವಾಲೋ

 
 
 
 
 
 
 
 
 
 
 

Leave a Reply