ಬೀದಿ ನಾಯಿಗಳ ದಾಳಿಗೆ ಬಾಲಕ ಮೃತ್ಯು!

ಐದು ವರ್ಷಗಳ ಬಾಲಕನನ್ನು ಬೀದಿ ನಾಯಿಗಳ ಹಿಂಡೊಂದು ದಾಳಿ ಮಾಡಿ ಕೊಂದಿರುವ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದಿದೆ.
ಮೃತ ಮಗುವನ್ನು ಪ್ರದೀಪ್ ಎಂದು ಗುರುತಿಸಲಾಗಿದೆ. ಬಾಲಕನ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಮಗು ರಸ್ತೆಯಲ್ಲಿ ಒಂದೇ ನಡೆಯುತ್ತಿರುವುದು ಕಂಡು ಬಂದಿದ್ದು, ಸ್ವಲ್ಪ ಸಮಯದ ನಂತರ, ಮೂರು ನಾಯಿಗಳು ಬಾಲಕನ ಕಡೆಗೆ ಬಂದು ಅವನನ್ನು ಸುತ್ತುವರೆದಿವೆ. ಭಯಭೀತನಾದ ಬಾಲಕ ಓಡಲು ಪ್ರಯತ್ನಿಸಿದಾಗ ನಾಯಿಗಳು ಅವನ ಮೇಲೆ ದಾಳಿ ಮಾಡಿದ್ದು ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 
 
 
 
 
 
 
 
 
 
 
 

Leave a Reply