ನಟ ವಿಜಯ್ ರಾಘವೇಂದ್ರ ಪತ್ನಿ ಇನ್ನಿಲ್ಲ

ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸೋಮವಾರ ನಿಧನರಾದರು.

ಪತಿ ವಿಜಯ್ ಜೊತೆ ಬ್ಯಾಂಕಾಕ್‌ಗೆ ಸ್ಪಂದನಾ ತೆರಳಿದ್ದು, ಅಲ್ಲಿಯೇ ಹೃದಯಾಘಾತವಾಗಿದೆ. ದಂಪತಿ ಕೆಲವೇ ದಿನಗಳಲ್ಲಿ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿದ್ದರು.

ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಪುತ್ರಿ ಸ್ಪಂದನಾ ಹಾಗೂ ನಟ ವಿಜಯ್ ರಾಘವೇಂದ್ರ ಪ್ರೀತಿಸಿ ಮದುವೆಯಾದವರು. ಅವರಿಗೆ ಶೌರ್ಯ ಎಂಬ ಪುತ್ರನಿದ್ದಾನೆ.

 
 
 
 
 
 
 
 
 
 
 

Leave a Reply