ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ ಶ್ರೀ .ದಯಾನಂದ್ ನಿವೃತ್ತಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸುಧೀರ್ಘ 36 ವರ್ಷ ಸೇವೆ ಸಲ್ಲಿಸಿ ಇಂದು ದಿನಾಂಕ 30/04/2022 ರಂದು ಸೇವಾ ನಿವೃತ್ತಿ ಹೊಂದಿರುತ್ತಾರೆ .ಉಡುಪಿಯ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 6 ವರ್ಷ ಕಚೇರಿ ಅಧೀಕ್ಷಕರಾಗಿದ್ದು .1 ವರ್ಷ ಪ್ರಭಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ .ಉಡುಪಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲೂ ಸೇವೆ ಸಲ್ಲಿಸಿರುತ್ತಾರೆ .ಇಂದು ರಜತಾದ್ರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಭಿನಂದನಾ ಪೂರ್ವಕವಾಗಿ ಬೀಳ್ಕೊಡುಗೆ ಮಾಡಲಾಯಿತು .ಕಾರ್ಯಕ್ರಮದಲ್ಲಿ ಶ್ರೀಮತಿ .ವೀಣಾ ವಿವೇಕಾನಂದ ಉಪನಿರ್ದೇಶಕರು (ಪ್ರಭಾರ ) ಮಾತನಾಡಿ ಶ್ರೀ .ದಯಾನಂದ್ ರವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಇಲಾಖೆಯಲ್ಲಿ ಸುಧೀರ್ಘ ಕಾಲ ಸೇವೆಯನ್ನು ನೀಡಿದ್ದು ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಸೇವೆಯನ್ನು ನೀಡಿ ಈಗ ನಿವೃತ್ತಿ ಹೊಂದಿದ್ದು ಅವರಿಗೆ ಮುಂದಿನ ಜೀವನ ಸುಖ ಶಾಂತಿ ನೀಡಲಿ ಎಂದು ಶುಭ ಹಾರೈಸಿದರು . ಕುಮಾರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಪ್ರಭಾರ ) ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ. ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕರಾದ ಶ್ರೀಮತಿ .ಚಂದ್ರಿಕಾ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು .

 
 
 
 
 
 
 
 
 
 
 

Leave a Reply