ಜಿಲ್ಲೆಯ ಅಂತಿಮ ವರ್ಷದ ಪದವಿ ನಿಲಯಾರ್ಥಿಯರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ

ಸಮಾಜ ಕಲ್ಯಾಣ ಇಲಾಖೆ, ಉಡುಪಿ ಕೌಶಲ್ಯ ಅಭಿವೃದ್ಧಿ ಇಲಾಖೆ ಮತ್ತು ನಾಂದಿ
ಫೌಂಡೇಶನ್ ಸಹಯೋಗದೊಂದಿಗೆ ಬನ್ನಂಜೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಅಂತಿಮ ವರ್ಷದ ಪದವಿ ನಿಲಯಾರ್ಥಿಯರಿಗೆ ಕೌಶಲ್ಯ ತರಬೇತಿ 6 ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ರಾಘವೇಂದ್ರ ಪ್ರಭು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಅಧೀಕ್ಷಕಿ ವಿಜಯಲಕ್ಷ್ಮೀ ದಿನ್ನಿ, ಮೇಲ್ವಿಚಾರಕಿ ಜಯಂತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನಾಂದಿ ಫೌಂಡೇಶನ್ ತರಬೇತುದಾರರಾದ ಕಾವ್ಯ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಹಾಗೂ ಜಿಲ್ಲಾ ಸಲಹೆಗಾರ್ತಿ ಸಂಧ್ಯಾರಾಣಿ ಪ್ರಶಸ್ತಿ ಪತ್ರ ವಿತರಿಸಿದರು.

ನಿಲಯದ ಮೇಲ್ವಿಚಾರಕಿ ಸುಚಿತ್ರ ಸ್ವಾಗತಿಸಿ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಬನ್ನಂಜೆಯ ವಿದ್ಯಾರ್ಥಿನಿ ಸಂಗೀತ ನಿರೂಪಿಸಿದರು.

 
 
 
 
 
 
 
 
 
 
 

Leave a Reply