ಉಡುಪಿ: ಬಿಕ್ಷಾಟನೆ ನಿರತ ಮಕ್ಕಳ ರಕ್ಷಣೆ

ಉಡುಪಿ ಜಿಲ್ಲೆಯಲ್ಲಿ ಬಿಕ್ಷಾಟನೆ ನಿರತ ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ಹಾಗೂ ಹಿರಿಯ ನಾಗರಿಕ ಸಮಿತಿಯ ಮುಖ್ಯಸ್ಥರಾದ ನಿತ್ಯಾನಂದ ಒಳಕಾಡು ಸಹಯೋಗದೊಂದಿಗೆ ಮಣಿಪಾಲ ಸುತ್ತಮುತ್ತ, ಉಡುಪಿ ಬಸ್ ನಿಲ್ದಾಣಗಳಲ್ಲಿ, ಹಾಗೂ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಜಂಟಿಯಾಗಿ ಕಾರ್ಯಚರಣೆಯನ್ನು ನಡೆಸಿದ್ದು ಈ ಸಂದರ್ಭದಲ್ಲಿ 5 ಕೀಪಂಚ್ ಮಾರುವ ಮಕ್ಕಳು ಹಾಗೂ ಇಬ್ಬರು ಬಲೂನ್ ಮಾರುವ ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಮಹೇಶ್ ರಕ್ಷಣಾಧಿಕಾರಿ (ಸಾಂಸ್ಥಿಕ), ಕಪಿಲಾ ರಕ್ಷಣಾಧಿಕಾರಿ (ಅಸಾಂಸ್ಥಿಕ), ಯೋಗೀಶ್ ಸಮಾಜ ಕಾರ್ಯಕರ್ತ, ಸುರಕ್ಷಾ ಸಮಾಜ ಕಾರ್ಯಕರ್ತೆ, ಸಂದೇಶ್ ಹಾಗೂ ಸುನಂದ ಔಟ್ ರಿಚ್ ವರ್ಕರ್, ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗಳಾದ ನಯನ ,ರೇಷ್ಮಾ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಸಾವಿತ್ರಿ, ಗಂಗರಾಜಪ್ಪ. ಎನ್ ,ಹಾಗೂ ಹಿರಿಯ ನಾಗರಿಕ ಸಮಿತಿಯ ಮುಖ್ಯಸ್ಥರಾದ ನಿತ್ಯಾನಂದ ಒಳಕಾಡು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply