ಮಣಿಪಾಲ: ವಿಶ್ವ ಭೂ ದಿನ ಪ್ರಯುಕ್ತ ಚಿತ್ರಕಲಾ‌ ಸ್ಪರ್ಧೆ

ಮಣಿಪಾಲ: ಪಾತ್ರೆ ಅಥವಾ ಮಾಪಕ ತುಂಬಲು ಹೇಗೆ ಒಂದೊಂದು ಹನಿ ನೀರೂ ಮುಖ್ಯವೋ ಹಾಗೆಯೆ ಮತದಾನದಲ್ಲಿ ಒಂದೊಂದು ಮತವೂ ಮುಖ್ಯ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಅದು ನಮ್ಮ ಹಕ್ಕು. ನಮ್ಮ ಮತ ನಮ್ಮ ಅಧಿಕಾರ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಅನಿತಾ ಎಂ.‌ಮಡ್ಲೂರ್ ಹೇಳಿದರು.

ಅವರು ಮಣಿಪಾಲದ ಮಣ್ಣಪಳ್ಳ ಕೆರೆಯ ಬಳಿ ವಿಶ್ವ ಭೂ ದಿನ ಪ್ರಯುಕ್ತ ಪ್ರಕೃತಿ ಸೌಂದರ್ಯದ ವಾತಾವರಣದಲ್ಲಿ ರವಿವಾರ ಎಂಐಟಿ ಮಣಿಪಾಲದ ರಾಷ್ಟ್ರೀಯ ಸೇವಾ ಯೋಜನೆಯ ಎರಡು ಘಟಕಗಳು, ರೋಟರಿ ಮಣಿಪಾಲ ಹಿಲ್ಸ್ ಹಾಗೂ ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲಾನಿಂಗ್ ವತಿಯಿಂದ ನಡೆದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಮತದಾರರ ಜಾಗೃತಿ ಅಭಿಯಾನದ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.
ರೋಟರಿ ಮಣಿಪಾಲ ಹಿಲ್ಸ್ ನ ಅಧ್ಯಕ್ಷೆ ಸವಿತಾ ಭಟ್ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ವಾಯುಸೇನೆಯ ನಿವೃತ್ತ ವಿಂಗ್ ಕಮಾಂಡರ್ ಭೋಜರಾಜ, ಎಂಐಟಿ ಮಣಿಪಾಲದ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಪೂರ್ಣಿಮಾ, ಲಕ್ಷ್ಮಣ ರಾವ್
ಉಪಸ್ಥಿತರಿದ್ದರು. ಎಂಐಟಿ ಸಹ ಪ್ರಾಧ್ಯಾಪಕಿ ಡಾ.ಆಶಾ ಸಿ.ಎಸ್. ನಿರ್ವಹಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply