ಮೊಬೈಲ್ ಕಳೆದು ಹೋದರೆ ಇನ್ನು ಮಂಗಳೂರು ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಮೆಸೇಜ್ ಮಾಡಿ!

ಮಂಗಳೂರು: ಕಳೆದು ಹೋದ ಮೊಬೈಲ್ ಪತ್ತೆಗೆ ಜನಸಾಮಾನ್ಯರಿಗೆ ನೆರವು‌ ನೀಡಲು ಮಂಗಳೂರು ಪೊಲೀಸರು ವಿಶೇಷ ಸಹಾಯವಾಣಿ ಪ್ರಾರಂಭಿಸಿದ್ದಾರೆ.

ಈಗಾಗಲೇ ಮೊಬೈಲ್‌ ಕಳೆದುಹೋದರೆ CEIR ಪೋರ್ಟಲ್ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು. 200ಕ್ಕೂಅಧಿಕ ಮೊಬೈಲ್ ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಲಾಗಿದೆ.

ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು, ಜನರಿಗೆ ಸಹಾಯಕ್ಕಾಗಿ ವಾಟ್ಸಪ್ ನಂಬರ್ ಸೇವೆ ಮಂಗಳೂರಿನಲ್ಲಿ ಆರಂಭಿಸಲಾಗಿದ್ದು ಮೊಬೈಲ್ ಕಳೆದುಕೊಂಡವರು ಪೋರ್ಟಲ್ ನಲ್ಲಿ ನೇರವಾಗಿ ಮಾಹಿತಿ‌ ನೀಡಬಹುದು.

ಮೊಬೈಲ್ ಕಳವಾದರೆ 8277949183 ವಾಟ್ಸಪ್ ನಂಬರ್ ಗೆ ‘hi’ ಮೆಸೇಜ್ ಮಾಡಿದರೆ ಪೊಲೀಸರೆ ಲಿಂಕ್ ಕಳುಹಿಸಿ ಯಾವ ರೀತಿ ಮಾಹಿತಿ ಅಪ್ ಲೋಡ್ ಮಾಡಬೇಕೆಂಬುದನ್ನು ತಿಳಿಸುತ್ತಾರೆ.

ಮೊಬೈಲ್ ಕಳೆದುಕೊಂಡವರು ಮೊಬೈಲ್ ನ IMEI ಸಂಖ್ಯೆಯನ್ನು ಅಗತ್ಯವಾಗಿ ಹೊಂದಿರಬೇಕಿದೆ.

 
 
 
 
 
 
 
 
 
 
 

Leave a Reply