ಮಲ್ಪೆ : ಕೆಂಡಕ್ಕೆ ಬಿದ್ದ ಅಯಪ್ಪ ಮಾಲಾಧಾರಿ

ಕೆಂಡ ಸೇವೆ ನಡೆಸುತ್ತಿದ್ದಾಗ ಅಯಪ್ಪ ಮಾಲಾಧಾರಿ ವ್ಯಕ್ತಿಯೊಬ್ಬರು ಬೆಂಕಿಗೆ ಬಿದ್ದ ಘಟನೆ ಮಲ್ಪೆಯಲ್ಲಿ ನಡೆದಿದ್ದು ಘಟನೆಯ ವಿಡಿಯೋ ವೈರಲ್ ಆಗಿದೆ. 

ಮಲ್ಪೆಯ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ವೇಳೆ ಅವಘಡ ನಡೆದಿದ್ದು ಕೆಂಡ ಹಾಯುವ ವೇಳೆ ಆಯ ತಪ್ಪಿ ಮಾಲಾಧಾರಿ ವ್ಯಕ್ತಿ ಬೆಂಕಿಗೆ ಬಿದ್ದಿದ್ದಾರೆ.‌ ಸ್ಥಳೀಯರ ಮೊಬೈಲ್ ನಲ್ಲಿ ವಿಡಿಯೋ ಸೆರೆಯಾಗಿದ್ದು ಆಯತಪ್ಪಿ ಬೀಳುತ್ತಿದ್ದಂತೆ ಜನ ಹೌಹಾರಿದ್ದಾರೆ. ಕೂಡಲೇ ಇತರೇ ಮಾಲಾಧಾರಿಗಳು ಆ ವ್ಯಕ್ತಿಯನ್ನು ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬರಿ ಮೈಯಲ್ಲಿ ಕೆಂಡ ಹಾಯುತ್ತಿದ್ದಾಗ ಘಟನೆ ನಡೆದಿದ್ದರಿಂದ ಮೈಯಲ್ಲಿ ಸುಟ್ಟ ಗಾಯಗಳಾಗಿವೆ. 

ಕರಾವಳಿಯಲ್ಲಿ ಸಂಪ್ರದಾಯ ಎನ್ನುವಂತೆ ಅಯ್ಯಪ್ಪ ಮಾಲಾಧಾರಿಗಳು ಕೆಂಡ ಸೇವೆ ನಡೆಸುತ್ತಾರೆ. ಕುದಿಯುವ ಬಾಣಲೆಯಿಂದ ಕೈಯಲ್ಲೇ ಅಪ್ಪ ಪ್ರಸಾದವನ್ನು ತೆಗೆಯುವ ಸಂಪ್ರದಾಯವನ್ನೂ ಮಾಡುತ್ತಾರೆ. ಅಚಲ ವೃತ ಇದ್ದವರು ಇದನ್ನು ನಿರಾಯಾಸವಾಗಿ ಮಾಡುತ್ತಾರೆ. ಇಲ್ಲಿ ಕೆಂಡ ಹಾಯುವಾಗ ಸಣ್ಣ ಎಡವಟ್ಟು ಆಗಿದೆ.

 
 
 
 
 
 
 
 
 
 
 

Leave a Reply