ಕೊಡವೂರು : ವಾರ್ಷಿಕೋತ್ಸವ, ಸಮ್ಮಾನ

ಕೊಡವೂರು ಸ.ಮಾ.ಹಿ.ಪ್ರಾ ಶಾಲಾ 150 ನೇ, ಹಳೆವಿದ್ಯಾರ್ಥಿ ಸಂಘ, ಯುವಕ ಸಂಘದ 59ನೇ ಹಾಗೂ ದುರ್ಗಾ ಮಹಿಳಾ ಮಂಡಲದ 22 ನೇ ಸಂಯುಕ್ತ ವಾರ್ಷಿಕೋತ್ಸವವು ಜ‌.20 ರಂದು ಕೊಡವೂರು ಶಾಲಾ ಮೈದಾನದಲ್ಲಿ ಜರಗಿತು.

ಅಂದು ಬೆಳಿಗ್ಗೆ ಹಿರಿಯ ಸಾಮಾಜಿಕ ಮುಂದಾಳು ಕೆ.ಟಿ ಪೂಜಾರಿ ಧ್ವಜಾರೋಹಣಗೈದರು.ಶಾಸಕ ಯಶ್ ಪಾಲ್ ಸುವರ್ಣ ನೂತನ ವಿವೇಕ ಕೊಠಡಿ ಉದ್ಘಾಟಿಸಿ ಮಾತನಾಡಿ ಆರೋಗ್ಯಪೂರ್ಣ ಸಮಾಜಕ್ಕೆ ಶಿಕ್ಷಣ ‌ಹಾಗೂ ಆರೋಗ್ಯ ವ್ಯವಸ್ಥೆಗಳು ಸಮರ್ಪಕವಾಗಿ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು. ಹಾಗೆಯೇ ನಮ್ಮ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ಕೊಡುವಷ್ಟು ಸರ್ಕಾರಿ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿ ಬೆಳೆದು ನಿಂತಿರಲು ಜಿಲ್ಲೆಯ ಹೃದಯ ಶ್ರೀಮಂತರು ನೀಡಿದ ಕೊಡುಗೆಗಳು ಕಾರಣ ಎಂದರು.

ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಈಶ್ವರ್ ಮಲ್ಪೆ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ಇವರನ್ನು ಸಮ್ಮಾನಿಸಲಾಯಿತು.

ಶೈಕ್ಷಣಿಕ ಪ್ರತಿಭೆ ಸಾತ್ವಿಕ್ ಪಿ.ಭಟ್ ಹಾಗೂ ಕ್ರೀಡಾ ಪ್ರತಿಭೆ ಅವನಿ ಗಣೇಶ್ ಕಲ್ಮಾಡಿ ಇವರಿಗೆ ಪ್ರತಿಭಾಭಿನಂದನೆ, ಅರ್ಥಿಕ ಅಶಕ್ತರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದತ್ತಿನಿಧಿ, ಕ್ರೀಡಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಗರಸಭಾ ಸದಸ್ಯ ವಿಜಯ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್, ಉದ್ಯಮಿಗಳಾದ ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು,ಮಿಥುನ್ ಕುಂದರ್ ಮಲ್ಪೆ, ಭಾಸ್ಕರ್ ಪಾಲನ್ ಬಾಚನಬೈಲು, ಖ್ಯಾತ ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣೈ , ಹಿರಿಯ ಸಾಮಾಜಿಕ ಮುಂದಾಳು ಗುರುರಾಜ್ ರಾವ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ ಭಾಗವಹಿಸಿದ್ದರು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ, ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ಮೀನಾಕ್ಷಿ ಮಾಧವ, ಯುವಕ ಸಂಘದ ಗೌರವಾಧ್ಯಕ್ಷ ಪ್ರಭಾತ್ ಕೋಟ್ಯಾನ್, ವಿದ್ಯಾರ್ಥಿ ನಾಯಕ ರಿತ್ವಿಕ್ ಎಸ್.ಜಿ, ಉಪಸ್ಥಿತರಿದ್ದರು.

ಶಾಲಾ ವರದಿಯನ್ನು ಮುಖ್ಯ ಶಿಕ್ಷಕಿ ಪುಷ್ಪಾವತಿ,ಸಂಘದ ವರದಿಯನ್ನು ಕಾರ್ಯದರ್ಶಿ ಜಗದೀಶ್ ಶೆಟ್ಟಿ ವಾಚಿಸಿದರು.ಯುವಕ ಸಂಘದ ಅಧ್ಯಕ್ಷ ದೀಪಕ್ ವಿ.ದೇವಾಡಿಗ ಸ್ವಾಗತಿಸಿದರು.ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply