ಅಪಘಾತ ಪ್ರಕರಣ ಆರೋಪಿಗೆ ನ್ಯಾಯಾಲಯದಿಂದ ಶಿಕ್ಷೆ

ದಿನಾಂಕ 17.10.2014 ರಂದು ಸಂಜೆ 5:45 ಗಂಟೆಯ ಸಮಯದಲ್ಲಿ ಮಾನ್ಯ ಕಾರ್ಕಳ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆದಿಂಜೆ ಗ್ರಾಮದ, ಮಾವಿನ ಕಟ್ಟೆ ಎಂಬಲ್ಲಿ ಖಾಸಗಿ ಬಸ್ಸು ಮತ್ತು ಆಟೋರಿಕ್ಷದ ನಡುವೆ ನಡೆದ ಅಪಘಾತದಲ್ಲಿ, ಆಟೋರಿಕ್ಷದಲ್ಲಿ ಪ್ರಯಾಣಿಸುತ್ತಿದ್ದ 3 ಜನ ವಯಸ್ಕರು ಮತ್ತು ಚಿಕ್ಕ ಮಕ್ಕಳನ್ನು ಸೇರಿದಂತೆ 9 ಜನ ಗಾಯಗೊಂಡಿದ್ದು, ಗಾಯಾಳುಗಳ ಪೈಕಿ ಶ್ರೀಮತಿ ಜಮೀಲಾ ಮತ್ತು ಕು. ನಿಹಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ಈ ಕುರಿತು ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ ಜಿ ಎಂ ನಾಯ್ಕರವರು ಆರೋಪಿಯಾದ ಶ್ರೀನಿವಾಸ್ ಪೂಜಾರಿ ವಿರುದ್ಧ ದೋಷಾರೋಪಣೆಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಪ್ರಕರಣವನ್ನು ವಿಚಾರಣೆ ಮಾಡಿದ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ ಕಾರ್ಕಳದ ಪ್ರಭಾರ ನ್ಯಾಯಾಧೀಶರಾದ ಚೇತನಾ ಏಸ್.ಎಫ್ ರವರು ಆರೋಪಿಗೆ 6 ತಿಂಗಳ ಸಾಧಾರಣ ಸಜೆ ಮತ್ತು 5000 ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, 1,000 ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, 500 ದಂಡ ತಪ್ಪಿದ್ದಲ್ಲಿ 15 ದಿನಗಳ ಸಾಧಾರಣ ಸಜೆ, 1,000 ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆಯನ್ನು ವಿಧಿಸಿ ತೀರ್ಪನ್ನ ನೀಡಿದ್ದು, ಸರ್ಕಾರದ ಪರವಾಗಿ ರಾಜಶೇಖರ್ ಪಿ ಶಾಮರಾವ್ ಸಹಾಯಕ ಸರ್ಕಾರಿ ಅಭಿಯೋಜಕರು ಕಾರ್ಕಳ ವಾದಿಸಿದ್ದರು.

 
 
 
 
 
 
 
 
 
 
 

Leave a Reply