ಅನಂತತೆಯಿಂದ ಕೂಡಿದ”ಅಮ್ಮನ ಪ್ರೀತಿ”  

ಅಮ್ಮನ ಅಡುಗೆಯ ರುಚಿಯ ರಹಸ್ಯ..
ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಮಾತೊಂದು ನೆನಪಾಗುತ್ತಿದೆ. ‘ತಾಯಿಯ ಅಡುಗೆಗೂ, ಹೋಟೆಲ್ ನ ಅಡುಗೆಗೂ ವ್ಯತ್ಯಾಸ ವೇನೆಂದರೆ – ತಾಯಿ ಅಡುಗೆ ಮಾಡೋವಾಗ ಎಲ್ಲಾ ದಿನಸಿ ಸೇರಿಸಿದ್ರೂ ಅದರೊಂದಿಗೆ ‘ಪ್ರೀತಿ’ ಎಂಬ ರುಚಿ ಸೇರಿಸ್ತಾಳೆ, ಆದುದ ರಿಂದ ರುಚಿ ರುಚಿಯಾಗಿ ಉಣಲು ಸಿದ್ಧವಾಗುತ್ತದೆ. ಆದರೆ ಹೋಟೆಲ್ ಗಳಲ್ಲಿ ಪ್ರೀತಿ ಕೆಲವೊಮ್ಮೆ ಇದ್ದರೂ ‘ಧನ, ಹಣ’ ದ ಅಪೇಕ್ಷೆ. ಅದರ ಹಿಂದಿರೋ ಕಾರಣ(Tips).  ಅದು ಎಷ್ಟೆಂದರೂ ರುಚಿಸದು’ 

 

ಹಾಗಾಗಿ ನಮ್ಮಮ್ಮನ ಅಡುಗೆಯಂತೂ ನಳಪಾಕ, ಅಡುಗೆಯ ಪಾಕಶಾಲೆಯಲ್ಲೇ ಪಿ.ಎಚ್.ಡಿ ಪಡೆದಿರೋ ತರ ಅಡುಗೆ ಮಾಡು ತ್ತಾಳೆ. ಹೀಗೆ ಈ ಲೇಖನ ಓದೋ ಎಲ್ಲರಿಗೂ ಅವರವರ ತಾಯಿ ಮಾಡಿ ಉಣಬಡಿಸೋ ಎಲ್ಲಾ ಪದಾರ್ಥಗಳು ನಾಲಗೆಗೆ ರುಚಿ ಯನ್ನು ನೀಡಿ, ಆರೋಗ್ಯದ ದೃಷ್ಟಿಯಿಂದ ಹಿತವನ್ನು ನೀಡುತ್ತದೆ.

ಇತ್ತೀಚಿನ ಕೆಲ ವರ್ಷಗಳಿಂದ ಮನೆಯೂಟದ ಸವಿ ಎಷ್ಟೋ ಜನಕ್ಕೆ ತಪ್ಪಿಹೋಗಿತ್ತು, ಈ ಕೋವಿಡ್ ನಿಂದ ‘ವರ್ಕ್ ಫ್ರಂ ಹೋಂ’ ಬಂತೋ..  ಜನ ಮನೆಯಲ್ಲಿ ಕುಟುಂಬದವರೊಂದಿಗೆ ಕುಳಿತು ತಿನ್ನೋಕೆ ಶುರು ಮಾಡಿದ್ದಾರೆ. ಹೀಗೆ ಅಮ್ಮನ ಕೈರುಚಿಯನ್ನು ಸವಿಯುತ್ತಾ ಎಷ್ಟೋ ರೋಗರುಜಿನಗಳ ಬಾದೆಯಿಂದ ಮುಕ್ತರಾಗಿದ್ದಾರೆ. ಹಾಳು-ಮೂಳು ಫಾಸ್ಟ್ ಫುಡ್ ತಿಂದು, ಸ್ಲೋ‌ ಡೈಜೆಸ್ಟ್ ಆಗೋದನ್ನು ತಿನ್ನುತ್ತಿದ್ದ ಜನರು ಈಗ ಪೇಟೆ ತೊರೆದು ಹಳ್ಳಿಗೆ ಬಂದು ಅಮ್ಮನ ಕೈರುಚಿಯನ್ನು ಸವಿಯುತ್ತಿದ್ದಾರೆ.

ಸಿದ್ಧಾಪುರ, ಕಮಲಶಿಲೆ ಮೊದಲಾದೆಡೆ ಈ ಟೆಕ್ಕಿಗಳು ಇಂಟರ್ನೆಟ್ ಸಿಗದೇ ಕುಂದಾಪುರದ ಪೇಟೆಯಲ್ಲಿ ರೂಂ ಮಾಡಿಕೊಂಡು ಮನೆಯಿಂದ ಅಮ್ಮ ಮಾಡಿ ಕಳುಹಿಸಿದ ‘ಬುತ್ತಿ’ಯನ್ನು ತಂದು ತಿಂದು, ಕೆಲಸ ಮುಗಿಸಿಕೊಂಡು ಮನೆಗೆ ಮರಳಿ ಹೋಗ್ತಾ ಇದ್ದಾರೆ. ಇಲ್ಲಿ ತಾಯಿ ಯೋಚಿಸಿರ್ತಾಳೆ, ಕಾರಣ ಈಗೆಲ್ಲಾ ಸರ್ಕಾರ ಬಿಸಿಯೂಟ ಅಂತ ಶಾಲೆಯಲ್ಲಿ ನೀಡುತ್ತಿದೆ, ಆದರೆ ನಾವು ಕಲಿಯೋ ವಾಗ ‘ಬಿಸಿ ಹಾಲು'(ಪೌಡರ್ ನೀರಲ್ಲಿ ಮಿಕ್ಸ್ ಮಾಡಿ ಕೊಡೋರು) ಯೋಜನೆ ಇತ್ತು.  ನಾವು ಬೆಳಿಗ್ಗೆ ಮನೆಯಲ್ಲೇ ಅಮ್ಮನಿಂದ ತಯಾರಿಸಿ ಬಾಕ್ಸ್ ಲಿ ತರ್ತಾ ಇದ್ವಿ. ಅಮ್ಮ‌ ಬೆಳಿಗ್ಗೆ ಬೇಗ ಎದ್ದು ನಮಗೆಲ್ಲರಿಗೂ ಬೆಳಿಗ್ಗೆ ಏಳುವರೆ ಒಳಗೇ ತಯಾರಿ ಮಾಡಿ ಕೊಡ್ತಾ ಇದ್ರು.

ಹೀಗಿರುವಾಗ ತಾಯಿಯ ಆ ಕರುಣೆ, ಪ್ರೀತಿ, ವಾತ್ಸಲ್ಯ, ಅಡುಗೆಯಲ್ಲಿನ ಶ್ರದ್ಧೆ ಯಾರಿಂದ ಕೊಡಲೂ, ಮಾಡಲೂ ಅಸಾಧ್ಯ. ನಮ್ಮ ಅಮ್ಮನ ಮಾರ್ಗದರ್ಶನದಲ್ಲಿ ಎಷ್ಟೋ ತರಹೇವಾರು ತಿನಿಸುಗಳನ್ನು, ಪದಾರ್ಥಗಳನ್ನು ಮಾಡಿದರೂ ಅವಳೇ ಮಾಡಿದಾಗ ಬರೋ ರುಚಿ ಬರೋದೇ ಇಲ್ಲ, ಕಾರಣ ‘ಅಮ್ಮನ ಪ್ರೀತಿ’ ಅನಂತತೆಯಿಂದ ಕೂಡಿದೆ.  ಮಾತೃ ದೇವೋ ಭವ…

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply