Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

​ರಾ.ಸೇ.ಯೋ. ಸ್ವಯಂ ಸೇವಕರಿಂದ  ಮಾಸ್ಕ್ ಹಸ್ತಾಂತರ

ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ​ರಾಷ್ಟ್ರೀಯ  ಸೇವಾ ಯೋಜನೆಯ ವಿದ್ಯಾರ್ಥಿಗಳು ತಯಾರಿಸಿದ ಮಾಸ್ಕನ್ನು ಜಿಲ್ಲಾ ಆರೋಗ್ಯಾ ಧಿಕಾರಿಗಳಿಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಚಿಸಿದ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮಾತನಾಡಿ ಜಗತ್ತನ್ನೆ ಕಂಗೆಡಿಸಿದ ಕೊರೊನಾ ರೋಗ ನಿರ್ಮೂಲನಕ್ಕೆ ಸರ್ವರ ಸಹಕಾರ ಅಗತ್ಯವಾಗಿದೆ.

ಸರಕಾರದೊಂದಿಗೆ ಸಮಾಜದ ಎಲ್ಲರೂ ಸಹಕರಿಸಿದಾಗ ಈ ಕಾರ‍್ಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ನಮ್ಮ ಕಾಲೇಜಿನ ರಾ.ಸೇ.ಯೋ ವಿದ್ಯಾರ್ಥಿಗಳು ಜಿಲ್ಲಾಡಳಿತದ ಕಾಳಜಿಗೆ ಸ್ಪಂದಿಸಿ ಮಾಸ್ಕನ್ನು ನೀಡುತ್ತಿರುವುದು ಸಂತೋಷದ ಸಂಗತಿ ಎಂದರು. ಮಾಸ್ಕನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಸುಧೀರ್‌ಚಂದ್ರ ಸೂಡ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಾಕಷ್ಟು ಶ್ರಮಿ ಸುತ್ತಿದೆ. ಜನರೂ ಪರಿಸ್ಥಿತಿಯನ್ನು ಅರಿತು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.

ಪ್ರತಿಯೊಬ್ಬರೂ ತಮ್ಮ ಗಂಟಲದ್ರವ ಪರೀಕ್ಷೆಗೆ ತಾವಾಗಿಯೇ ಮುಂದೆ ಬಂದಲ್ಲಿ ರೋಗ ಹರಡುವುದನ್ನು ಶೀಘ್ರವಾಗಿ ತಡೆಯಬಹುದೆಂದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ.ಎ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಘಟಕ ರಾ.ಸೇ.ಯೋ ಅಧಿಕಾರಿ ಚೈತ್ರ ಸ್ವಾಗತಿಸಿ ಕರ‍್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸಂದೀಪ್ ವಂದಿಸಿದರು.​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!