ಉಡುಪಿ: ಟ್ಯಾಂಕರ್ ಢಿಕ್ಕಿ; ಪಾದಾಚಾರಿ ಸ್ಥಳದಲ್ಲಿ ಸಾವು!

ಉಡುಪಿ: ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ.

ಮೃತರನ್ನು ಉಡುಪಿ ಕಲ್ಲೂರು ನಿವಾಸಿ ಜಯ ದೇವಾಡಿಗ (64) ಎಂದು ಗುರುತಿಸಲಾಗಿದೆ. ಇವರು ಪಿತ್ರೋಡಿಯ ಹೋಲೋ ಬ್ಲಾಕ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಇಂದು ಸಂಜೆ ಕೆಲಸ ಮುಗಿಸಿ ಭಗವತಿ ಹಾರ್ಡ್‌ವೇರ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 
 
 
 
 
 
 
 
 
 
 

Leave a Reply