ಭಾಷಾಂತರ ಅಧ್ಯಯನ: ರಾಷ್ಟ್ರೀಯ ವಿಚಾರ ಸಂಕಿರಣ

ಬಹು ಭಾಷೆಯ, ಬಹು ಸಂಸ್ಕೃತಿಯ ಭಾರತದಲ್ಲಿ ಭಾಷಾಂತರ ಕಾರ್ಯ ಸಮೃದ್ಧ ಅವಕಾಶಗಳ ಕ್ಷೇತ್ರವಾಗಿದೆ. ಬಹುಭಾಷಾ ಜ್ಞಾನ ಜನಜೀವನದ ಭಾಗವಾಗಿರುವ ದೇಶದಲ್ಲಿ, ಭಾಷಾಂತರವು ಜ್ಞಾನ ಪಸರಿಸುವ ಮತ್ತು ಸಂಸ್ಕೃತಿಗಳನ್ನು ಬೆಸೆಯುವ ಸೇತುವಾಗಿದೆ ಎಂದು ಕುವೆಂಪು ವಿ.ವಿಯ ವಿಶ್ರಾಂತ ಉಪಕುಲಪತಿ ಡಾ. ಬಿ.ಎಸ್.ಶೇರಿಗಾರ ಅಭಿಪ್ರಾಯಪಟ್ಟರು.

ಅವರು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಇಲ್ಲಿ ಇಂಗ್ಲೀಷ್ ಅಧ್ಯಾಪಕರ ಸಂಘ, ಮಂಗಳೂರು ವಿ.ವಿ. ಇವರ ಸಹಭಾಗಿತ್ವದೊಂದಿಗೆ ನಡೆದ “ಭಾಷಾಂತರ ಅಧ್ಯಯನ: ಇತ್ತೀಚಿನ ಒಲವುಗಳು” ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಐಚ್ಛಿಕ ಇಂಗ್ಲೀಷ್ ವಿದ್ಯಾರ್ಥಿಗಳ “ಲಿಥೋಘರ್” ಪುಸ್ತಕ ಪ್ರದರ್ಶನವನ್ನು ಇದೇ ಸಂದರ್ಭದಲ್ಲಿ ಹಮ್ಮಿ ಕೊಳ್ಳಲಾಯಿತು. ಮಂಗಳೂರು ವಿ.ವಿಯ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಪರಿಣಿತ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಚಾರ ಸಂಕಿರಣದ ಆಶಯಗಳನ್ನು ವಿವರಿಸಿದರು.

ಕೇರಳದ ಕೇಂದ್ರೀಯ ವಿ.ವಿಯ ಡಾ. ಜೋಸೆಫ್ ಕೋಯಿಪಳ್ಳಿ, ಮೈಸೂರು ವಿ.ವಿಯ ಡಾ. ವಿಜಯ ಕುಮಾರ್ ಬೊರಟ್ಟಿ, ಕುವೆಂಪು ವಿ.ವಿಯ ಡಾ. ಅವಿನಾಶ್ ಟಿ., ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಕೇರಳ ಹಾಗೂ ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಸುಮಾರು ೧೦೦ ಪ್ರಾಧ್ಯಾಪಕರುಗಳು ಭಾಗವಹಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಭಾಷಾ ಸಹ ಪ್ರಾದ್ಯಾಪಕರು ಹಾಗೂ ವಿಚಾರ ಸಂಕಿರಣ ಸಂಚಾಲಕರಾದ ಪ್ರೊ. ಸೋಜನ್ ಕೆ.ಜಿ. ಸ್ವಾಗತಿಸಿ, ಇಂಗ್ಲೀಷ್ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ವಿಕ್ಟರ್ ವಾಜ್ ವಂದಿಸಿದರು. ಉಪನ್ಯಾಸಕಿ ಝೈಬುನ್ನೀಸಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply