ಸಿಬಿಲ್ (CIBIL) ಎಂದರೇನು ~ತ್ರಿವಿಕ್ರಮ ಹೆಬ್ಬಾರ್

ವ್ಯವಹಾರವಿದ್ದವರು ಒಂದಿಲ್ಲ ಒಂದು ಬಾರಿ ಸಾಮಾನ್ಯವಾಗಿ, ಬ್ಯಾಂಕ್ ನಿಂದ ಸಾಲ ತೆಗೆದು ಕೊಂಡಿರುತ್ತಾರೆ. ಹಿಂದೆ ಹೀಗೆ ಸಾಲ ಪಡೆಯುವಾಗ ಸುತ್ತ ಮುತ್ತಲ ಬ್ಯಾಂಕ್ ನಿಂದ ಸಾಲ ವಿಲ್ಲವೆಂದು ಪ್ರಮಾಣ ಪತ್ರ (NDC). ಪಡೆಯಬೇಕಿತ್ತು. ಬ್ಯಾಂಕ್ ನಿಂದ ಬ್ಯಾಂಕ್ ಗೆ ಈ ಪ್ರಮಾಣ ಪತ್ರಕ್ಕೆ ಅಲೆಯುವುದು ಗ್ರಾಹಕರಿಗೆ ಪ್ರಯಾಸಕರ ವಾಗಿತ್ತು ತಾವು ಕಂಡು ಕಾಣದ ಬ್ಯಾಂಕ್ ಗೆ ಅಲೆಯುವುದು ಹಿಂಸೆ ಯಾಗುತ್ತಿತ್ತು. ಅದಕ್ಕೆ ಪರಿಹಾರವಾಗಿ ಬಂದದ್ದು CIBIL.

ಹಾಗಾದರೆ ಏನಿದು CIBIL.? . Credit information buerue India (CIBIL) ಸಾಲಗಾರನ ಸಾಲ ವ್ಯವಹಾರ ದ ಬಗ್ಗೆ ಅಂಕಗಳನ್ನು ಕೊಡಲು ,ನಮ್ಮ ದೇಶದಲ್ಲಿ RBI ನಿಂದ ಅನುಮತಿ ಇರುವ , ನಾಲ್ಕುಸಂಸ್ಥೆಗಳಲ್ಲಿ ಒಂದು. ಇದು Transunion ಎಂಬ ಬಹುರಾಷ್ಟ್ರೀಯ ಕಂಪನಿಯ ಅಂಗಸಂಸ್ಥೆ. Experian, equifax, Highmark ಎಂಬ ನಾಲ್ಕು ಸಂಸ್ಥೆ ಗಳಿದ್ದರೂ ಸಿಬಿಲ್ ಹೆಚ್ಚು ಜನಪ್ರಿಯ.

ಭಾರತದ ಎಲ್ಲ ಬ್ಯಾಂಕ್ ಗಳು ಸಾಲದ ಮಾಹಿತಿ ಈ ಸಂಸ್ಥೆ ಗಳಿಗೆ ಅಂತರ್ಜಾಲ ಮೂಲಕ ಒದಗಿಸುತಾ ಇರುತ್ತವೆ. ಸಿಬಿಲ್ ಬ್ಯಾಂಕ್,ಸರಕಾರಿ ಸಂಸ್ಥೆಗಳಿಂದ ಹಾಗೂ ವಿವಿಧ ಆರ್ಥಿಕ ಸಂಸ್ಥೆ ಗಳಿಂದ ಮಾಹಿತಿ ಪಡೆಯುತ್ತದೆ. ಸಾಲಗಾರರ ಸಾಲ ವ್ಯವಹಾರದ ರೀತಿಯ ಮೇಲೆ ಮಾಹಿತಿ ಬೇಕಾದವರಿಗೆ ಅವರ ಸಾಲ ವ್ಯವಹಾರ ,ಸಾಲದ ಚರಿತ್ರೆ ಆಧಾರದ ಮೇಲೆ ಅಂಕಗಳನ್ನು ಒದಗಿಸುತ್ತದೆ. ಇದು ಅಂತರ್ಜಾಲ ದ ಮೂಲಕ ಸ್ವಯಂಚಾಲಿತವಾಗಿದ್ದು,ಅತ್ಯಂತ ನಿಖರವಾದ ವ್ಯವಸ್ಥೆ ಯಾಗಿದೆ.

ಇದರ ಕಣ್ಣಿಂದ ತಪ್ಪಿಸುವುದು ಕಷ್ಟ. ಈಗ ಬ್ಯಾಂಕ್ ಗಳಿಗೆ ಸಾಲ ಕೊಡುವ ಮುನ್ನ ಸಿಬಿಲ್ ಸ್ಕೋರ್ ನ ವರದಿ ತೆಗೆಯುವುದನ್ನು ಕಡ್ಡಾಯ ಗೊಳಿಸಿದ್ದಾರೆ. ನೀವು ಸಾಲಕ್ಕೆ ಅರ್ಜಿ ಹಾಕಿದ ಕೂಡಲೇ ನಿಮ್ಮ ಸಿಬಿಲ್ ಅಂಕ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಸಿಬಿಲ್ ಅಂಕ ಕಮ್ಮಿ ಇದ್ದರೆ ಸಾಲದ ಅರ್ಜಿ ಅಲ್ಲಿಯೇ ರದ್ದಾಗುತ್ತದೆ. ನಿಮ್ಮ ಸಿಬಿಲ್ ಅಂಕ ಚೆನ್ನಾಗಿದ್ದರೆ ಪ್ರಥಮ ಪ್ರಭಾವ ಚೆನ್ನಾಗಿ ಮೂಡುತ್ತದೆ ಮತ್ತು ನಿಮ್ಮ ಸಾಲದ ಅರ್ಜಿ ಮಂಜೂರಾತಿ ಯ ಮುಂದಿನ ಹಂತಕ್ಕೆ ಹೋಗುತದೆ.

ಅದುದರಿಂದ ಸಾಲ ಪಡೆದವರು ಸಾಲದ ವ್ಯವಹಾರ ಕ್ರಮಬದ್ಧವಾಗಿ ಇಟ್ಟುಕೊಳ್ಳಿ . ಇಲ್ಲದಿದ್ದರೆ ತುರ್ತು ಸಂದರ್ಭಗಳಲ್ಲಿ ಸಮಸ್ಯೆ ಯಾದೀತು. ಯಾಕೆಂದರೆ ಈಗ ಬ್ಯಾಂಕ್ ಗಳು ಸಾಲಕೊಡಬಹುದೇ ಇಲ್ಲವೆ,ಬಡ್ಡಿ ಪ್ರಮಾಣ ಎಲ್ಲಾ ಸಿಬಿಲ್ ಸ್ಕೋರ್ ಅಧಾರ ದ ಮೇಲೆ ನಿರ್ಧರಿಸುತ್ತವೆ.

ಸಿಬಿಲ್ ಅಂಕ ಹೆಚ್ಚಿದಷ್ಟು ಉತ್ತಮ. 750 ಕ್ಕಿಂತ ಹೆಚ್ಚಿದ್ದರೆ ಅತ್ತುತ್ತಮ. 700 ರಿಂದ 749 ಉತ್ತಮ. 650 ರಿಂದ 699 ಅಥವಾ ಮೈ ನಸ್ ಒಂದು ಸ್ವೀಕರಾರ್ಹ. 600 ರಿಂದ 649 ಮಧ್ಯಮ. 300 ರಿಂದ 599 ಅಥಮ, ಕೂಲಂಕುಶ ವಾಗಿ ಗಮನಿಸಬೇಕು ಎಂದು ಪರಿಗಣಿಸಲಾಡುತ್ತದೆ. ನೀವು ಸಾಲವೆ ಪಡೆದಿರದಿದ್ದರೆ ಮೈನಸ್ ಒಂದು ಅಂಕ ಸಿಗುತ್ತದೆ.

ಕೆಲವು ಬ್ಯಾಂಕುಗಳು 600 ಕ್ಕಿಂತ ಕಡಿಮೆ ಅಂಕ ಗಳಿದ್ದರೆ ಸಾಲ ಕೊಡುದಿಲ್ಲ. ಕೆಲವು ಬ್ಯಾಂಕುಗಳು ಅದಕ್ಕೆ ಕಾರಣ ಅಧ್ಯಯನ ಮಾಡಿ ಒಂದು ವೇಳೆ ಸೂಕ್ತ ಕಾರಣ ಗಳಿದ್ದರೆ ಮೇಲಧಿಕಾರಿಗಳ ಅನುಮತಿ ಮೇಲೆಗೆ ಸಾಲ ಕೊಡುತ್ತಾರೆ .ಅದಕ್ಕೆ ಬಡ್ಡಿ ಜಾಸ್ತಿ. 700 ಕಿಂತ ಜಾಸ್ತಿ ಅಂಕಗಳಿದ್ದರೆ ಬಡ್ಡಿ ಕಮ್ಮಿ. ಸಿಬಿಲ್ ಅಂಕ ನಿಮಗೆ ಸಾಲ ಕೊಡುವ ಅರ್ಹತೆ ಮಾತ್ರ ತಿಳಿಸುತ್ತದೆ. ಬಾಕಿ ವಿಷಯ ನಿಮ್ಮ ಸಾಲದ ವಿಧಗಳನ್ನು ಹೊಂದಿಕೊಂಡು ಬೇರೆ ಬೇರೆ ನಿಯಮಗಳನ್ನು ಹೊಂದಿರುತ್ತವೆ.

ಹಾಗಾದರೆ ಉತ್ತಮ ಸಿಬಿಲ್ ಅಂಕ ಗಳನ್ನು ಹೇಗೆ ಸಂಪಾದಿಸಬಹುದು ನೋಡೋಣ. ನಿಮ್ಮ ಆರ್ಥಿಕ ಶಿಸ್ತು ಸಿಬಿಲ್ ಅಂಕ ದ ಮೇಲೆ ಪ್ರಭಾವ ಬೀಳುತ್ತದೆ.
*ನೀವು ತೆಗೆದು ಕೊಂಡ ಸಾಲದ ಮರುಪಾವತಿ ಮೇಲೆ ನಿಮ್ಮ ಅಂಕ ಹೆಚ್ಚು ಅವಲಂಬಿತ ವಾಗಿದೆ. ಪ್ರತಿ ತಿಂಗಳು ತಪ್ಪದೆ ಕಂತುಗಳನ್ನು ಪಾವತಿಸಿದರೆ ಹೆಚ್ಚು ಅಂಕ ದೊರಕುತ್ತದೆ. ಗಮನಿಸಿ 10 ತಾರೀಕಿಗೆ ಕಟ್ಟುವ ಕಂತು, 25 ತಾರೀಕಿಗೆ ಕಟ್ಟಿದರೂ ಸಾಲ 15 ದಿನ ಬಾಕಿ ಆಗಿರುತ್ತದೆ. ಪ್ರತಿ ತಿಂಗಳು ಹಾಗೆ ಆದರೆ ಸಿಬಿಲ್ ಅಂಕ ಕುಸಿಯಿತ್ತದೆ. ಸಾಲ ಅನುತ್ಪಾದಕ ಸಾಲ (NPA) ಆದರೆ ಸಿಬಿಲ್ ಪಾತಾಳಕ್ಕೆ ಕುಸಿಯುತ್ತದೆ.

ಮಾತ್ರವಲ್ಲ ಅದು ಸಿಬಿಲ್ ವರದಿಯಲ್ಲಿ ಕಂಡು ಬರುತ್ತದೆ. ಮುಂದೆ ಯಾವುದೇ ಬ್ಯಾಂಕುಗಳಲ್ಲಿ ಸಾಲ ಸಿಕ್ಕುವುದು ಕಷ್ಟ ವಾಗುತ್ತದೆ.ಆದುದರಿಂದ ಪಡೆದ ಸಾಲ ಅವಧಿಯೊಳಗೆ ಮರುಪಾವತಿಸಿ. ಪ್ರತಿ ತಿಂಗಳ ಕಂತಿನ ದಿನಾಂಕ ತಿಳಿದು, ಅದರ ಮೊದಲಿನ ದಿನಕ್ಕೆ ಸ್ವಯಂ ವರ್ಗಾವಣೆಗೆ ಬ್ಯಾಂಕ್ ಗೆ ತಿಳಿಸಿ ವ್ಯವಸ್ಥೆ ಮಾಡಿದರೆ ಉತ್ತಮ.

*ನಿಮ್ಮ ಸಾಲ ಓವರ್ ಡ್ರಾಫ್ಟ್ ಆಧವಾ ಕ್ರೆಡಿಟ್ ಕಾರ್ಡ್ ಆಗಿದ್ದರೆ ಸಾಲ ಉಪಯೋಗದ ಅನುಪಾತ ದ ಮೇಲೆ ಅಂಕ ವ್ಯತ್ಯಾಸ ವಾಗುತ್ತದೆ. ಅನಗತ್ಯ ಹಲವು ಕ್ರೆಡಿಟ್ ಕಾರ್ಡ್ ಪಡೆದು, ಕೆಲವುದನ್ನು ಉಪಯೋಗ ಮಾಡದೆ, ಖಾತೆ ನಿಷ್ಕ್ರಿಯ ವಾದರೆ, ಅಥವಾ ಅದನ್ನು ಕಾಲಕಾಲಕ್ಕೆ ರಿನಿವಲ್ ಮಾಡದಿದ್ದರೆ, ಅಥವಾ ಪ್ರತಿ ತಿಂಗಳು ಹಾಕುವ ಬಡ್ಡಿ ಪ್ರತಿ ತಿಂಗಳು ಜಮಾ ಅಗದಿದ್ದರೆ,ಮೊತ್ತ ಮಿತಿಯೊಳಗೆ ಇದ್ದರೂ ಸಿಬಿಲ್ ಅಂಕ ಕುಸಿಯುತ್ತದೆ.

* ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಹಲವು ಕಡೆ ಪಡೆದಿದ್ದರು ಅದು ಸಿಬಿಲ್ ವರದಿಯಲ್ಲಿ ಗೋಚರಿಸುತ್ತದೆ.
* ದೀರ್ಘಾವಧಿ ಸಾಲ ಪಡೆಯಿರಿ. ನಿಮ್ಮ EMI ಕಮ್ಮಿ ಇದ್ದು. ಸಾಲ ಸುಸ್ತಿಯಾಗುವುದು ಕಮ್ಮಿಯಾಗುತ್ತದೆ.
* ಪದೇ ಪದೇ ಸಿಬಿಲ್ ವರದಿ ತೆಗೆದರೂ ಅಂಕ ಕಮ್ಮಿ ಆಗುತ್ತದೆ.
* ನೀವು ಬೇರೆ ಯವರೊಂದಿಗೆ ಜಂಟಿ ಯಾಗಿ ಸಾಲ ತೆಗೆದು, ಅವನ ಸಾಲ ನಡವಳಿಕೆ ಸರಿ ಇಲ್ಲದಿದ್ದರೆ ನಿಮ್ಮ ಅಂಕ ಕುಸಿಯುತ್ತದೆ
* ನಿಮ್ಮ ಜಾಮೀನುದಾರರ ಸಾಲ ಸರಿ ಇರದಿದ್ದರೆ ಅದೂ ಕೂಡ ಸಿಬಿಲ್ ವರದಿಯಲ್ಲಿ ನಮೋದು ಆಗುತ್ತದೆ.
ಗಮನಿಸಿ ಒಮ್ಮೆ ಸಾಲ ಸುಸ್ತಿ ಯಾಗಿ ಸಿಬಿಲ್ ಅಂಕ ಕಮ್ಮಿ ಆದರೆ. ಆ ಸಾಲ ಚುಕ್ತಾ ಗೊಳಿಸದರೂ. ಸಿಬಿಲ್ ಅಂಕ ಸರಿ ಅಗಲು ಸಮಯ ಹಿಡಿಯುತ್ತದೆ.

ಓರ್ವ ಸಾಲ ಪಡೆದು ನಮ್ಮ ದೇಶದ ಯಾವ ಮೂಲೆಗೂ ಹೋದರು, ಸಿಬಿಲ್ ನಲ್ಲಿ ನಿಮ್ಮ ಆಧಾರ್ ಪಾನ್, ಹಾಕಿ ನೋಡಿದರೆ ಅದು ವರದಿ ಯಲ್ಲಿ ಗೊತ್ತಾಗುತ್ತದೆ. ಉದಾಹರಣೆಗೆ, ಓರ್ವ ಬೆಳ್ತಂಗಡಿಯಲ್ಲಿ ಸಾಲ ತೆಗೆದು ಬಿಹಾರಕ್ಕೆ ಹೋಗಿ ಬ್ಯಾಂಕ್ ಗೆ ಸಾಲಕ್ಕೆ ಅರ್ಜಿ ಹಾಕಿದರೂ ಗೊತ್ತಾಗುತ್ತದೆ. ಅದುರಿಂದ ಸಾಲ ತೆಗೆದು ಬಾಕಿ ಮಾಡಿ, ಊರು ಬಿಟ್ಟು, ಪರ ಊರಿಗೆ ಹೋಗಿ ಸಾಲ ಪಡೆಯುವರಿಗೆ ಈಗ ಕಷ್ಟ.

ಆದುದರಿಂದ ವ್ಯವಹಾರಸ್ತರೆ, ಸಾಲದ ವ್ಯವಹಾರ ಸರಿಯಾಗಿ ಮಾಡಿ  ಸಾಲ ಬಾಕಿಯಾದರೆ ಏನು ಬಡ್ಡಿ ಸ್ವಲ್ಪ ಜಾಸ್ತಿ ಕಟ್ಟಿದರಾಯಿತು ಎಂಬ ಉಡಾಫೆ ಮನೋಭಾವ ಬೇಡಾ. ತುರ್ತು ಸಂದರ್ಭದಲ್ಲಿ ಸಮಸ್ಯೆಯಾದೀತು.
ತ್ರಿವಿಕ್ರಮ ಹೆಬ್ಬಾರ್,ಬೆಳ್ತಂಗಡಿ
(ನಿವೃತ್ತ ಬ್ಯಾಂಕ್ ಮುಖ್ಯ ಪ್ರಬಂಧಕರು , ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್)

 
 
 
 
 
 
 
 
 
 
 

Leave a Reply