ಬ್ರಾಹ್ಮಣ ಮಹಾಸಭಾ ಕೊಡವೂರು ಇವರಿಂದ ಸಾಮೂಹಿಕ ದುರ್ಗಾ ನಮಸ್ಕಾರ

ನಮ್ಮ ದುರ್ಗತಿಗಳನ್ನು ನಾಶ ಮಾಡಿ, ದುರಿತಗಳನ್ನು ನಿವಾರಿಸಿ ನಮ್ಮನ್ನು ದುಷ್ಟ ಶಕ್ತಿಗಳಿಂದ ಕೋಟೆಯಂತೆ ರಕ್ಷಿಸುವ ದುರ್ಗಾ ಮಾತೆಯ ಆರಾಧನೆಯಿಂದ ಸದ್ಗತಿ ಪ್ರಾಪ್ತವಾಗುತ್ತದೆ. ಕಲಿಯುಗದಲ್ಲಿ ಕ್ಷಿಪ್ರ ಪ್ರಸಾದವನ್ನು ನೀಡುವ ಗಣಪತಿಯ ಪೂಜೆ ಹಾಗೂ ದುರ್ಗಾರಾಧನೆ ಬಲು ಪ್ರಶಸ್ತವಾಗಿದೆ ಎಂದು ವಿದ್ವಾನ್ ಶಿವರಾಜ್ ಕಂಬಳಕಟ್ಟ ಅಭಿಪ್ರಾಯ ಪಟ್ಟರು. ಬ್ರಾಹ್ಮಣ ಮಹಾಸಭಾ ಕೊಡವೂರು ವಿಪ್ರಶ್ರೀಯಲ್ಲಿ ಆಯೋಜಿಸಿದ್ದ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯ ಸಂದರ್ಭದಲ್ಲಿ ನಮ್ಮಲ್ಲಿದ್ದ ಅಜ್ಞಾನವನ್ನು ದೂರಗೊಳಿಸಿ ಜ್ಞಾನವನ್ನು ಪ್ರೇರೇಪಿಸುವ ಜ್ಞಾನದಾತೆ ದುರ್ಗಾಮಾತೆಯ ಆರಾಧನೆಯ ಪ್ರಾಮುಖ್ಯತೆಯನ್ನು ತಿಳಿಸಿದರು . ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿದ್ವಾನ್ ಕೊಡವೂರು ಪ್ರಸಾದ್ ಭಟ್ ರವರ ನೇತೃತ್ವದಲ್ಲಿ ,ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್ ರವರ ಸಂಯೋಜನೆಯಲ್ಲಿ, ಭಾಸ್ಕರ್ ಆಚಾರ್ಯ ಬೆಂಗಳೂರು ಇವರ ಮುಖ್ಯ ಪೂಜಾ ಸೇವೆಯೊಂದಿಗೆ ಜರುಗಿದ ಈ ದುರ್ಗಾ ಪೂಜೆಯಲ್ಲಿ ಬ್ರಾಹ್ಮಣ ಮಹಾಸಭಾ ಕೊಡವೂರು ಇದರ ಗೌರವಾಧ್ಯಕ್ಷರಾದ ಪಿ.ಗುರುರಾಜ್ ರಾವ್ , ಗೋವಿಂದ ಐತಾಳ್ , ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್, ಕೋಶಾಧಿಕಾರಿ ಶ್ರೀಧರ್ ಶರ್ಮ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply