ಬೈಂದೂರು: ಕಾರು ಹಾಗೂ ವ್ಯಕ್ತಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ

ಬೈಂದೂರು: ಕಾರೊಂದು ಸುಟ್ಟು ಕರಕಲಾದ ಸ್ಥೀತಿಯಲ್ಲಿ ಪತ್ತೆಯಾಗಿದ್ದು ಅದರೊಳಕ್ಕೆ ಗುರುತು ಸಿಗದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಕೂಡ ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಹೇನಬೇರು ಎಂಬಲ್ಲಿ ನಡೆದಿದೆ.

ವ್ಯಕ್ತಿ ದೇಹ ಸುಟ್ಟು ಕರಕಲಾದ ಕಾರಣ ಗುರುತು ಪತ್ತೆಯಾಗಿಲ್ಲ. ಇನ್ನು ಈ ಘಟನೆ ಮಂಗಳವಾರ ತಡರಾತ್ರಿ ನಡೆದಿರುವ ಸಾಧ್ಯತೆಯಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಸುಟ್ಟು ಕರಕಲಾದ ಕಾರು ಪೋರ್ಡ್ ಕಂಪೆನಿಯ ಐಕಾನ್ ಕಾರು ಎನ್ನಲಾಗಿದ್ದು, ಚಾಸ್ಸಿಸ್ ಹಾಗೂ ಇಂಜಿನ್ ನಂಬರ್ ಕೂಡ ಸುಟ್ಟು ಹೋದ ಕಾರಣ ಕಾರಿನ ಮಾಲಕರ ಪತ್ತೆ ಕೂಡ ಕಷ್ಟ ಸಾಧ್ಯವಾಗಿದೆ. ಇನ್ನು ಸ್ಥಳಕ್ಕೆ ಫೋರೆನ್ಸಿಕ್ ತಜ್ಞರು ಆಗಮಿಸಿದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭಿಸಲಿದ್ದು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply