ಡಿಡಿ ವಿತರಿಸಿ ಮಕ್ಕಳಲ್ಲಿ ಕ್ಷಮೆ ಕೇಳಿದ ಪತ್ನಿಯರು

ಕ್ಯಾಲನೂರು ಗ್ರಾಮದ ಕರ್ನಾಟಕ ಪಬ್ಲಿಕ್​ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಾವಿರ ಕೋಟಿ ಆಸ್ತಿ ಒಡೆಯ ಕೆಜಿಎಫ್ ಬಾಬು ಕೊಟ್ಟಿದ್ದ ಚೆಕ್​ಗಳು ಬೌನ್ಸ್​ ಆಗಿ ಮಕ್ಕಳಿಗೆ ಸಮಸ್ಯೆ ಉಂಟಾಗಿತ್ತು. ತೊಂದರೆ ಅನುಭವಿಸಿದ ಎಲ್ಲ ಮಕ್ಕಳಿಗೂ ಕೆಜಿಎಫ್ ಬಾಬು ಅವರ ಪತ್ನಿಯರಿಬ್ಬರೂ ತಲಾ 1100 ರೂಪಾಯಿ ಡಿಡಿಯನ್ನು ವಿತರಿಸಿದ್ದಾರೆ.

ಕೆಜಿಎಫ್​​ ಬಾಬು 2021ರ ಸೆಪ್ಟೆಂಬರ್​ ಕೊನೇ ವಾರದಲ್ಲಿ 250ರಿಂದ 450 ವಿದ್ಯಾರ್ಥಿಗಳಿಗೆ ತಲಾ 500 ರೂ.ಗಳ ಚೆಕ್​ ವಿತರಣೆ ಮಾಡಿದ್ದರು. ಅವೆಲ್ಲವೂ ಬೌನ್ಸ್​ ಆಗಿತ್ತು. ರಿಟರ್ನ್​ ಚೆಕ್​ ಬೌನ್ಸ್​ ಆಗಿದ್ದ ಪರಿಣಾಮ ಮಕ್ಕಳ ಅಕೌಂಟ್​ನಿಂದ 590 ರೂ. ಕಟ್ಟಾಗಿತ್ತು. ಈ ಬಗ್ಗೆ ಅಸಮಾಧಾನ ಹೊರಹಾಕಿದ್ದ ಶಾಲಾ ವಿದ್ಯಾರ್ಥಿಗಳು, ಕೆಜಿಎಫ್​ ಬಾಬು ಅವರು ಚೆಕ್​ ನೀಡಿದ್ದರಿಂದ ನಮಗೆ ಸಾಲದ ಹೊರೆಯಾಗಿದೆ ಎಂದು ಅಳಲುತೋಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಎಚ್ಚತ ಬಾಬು ಅವರ ಪತ್ನಿಯರಾದ ರೋಷನ್​ ತಾಜ್ ಮತ್ತು ಜೆಲಿಜಿಯಾ ಕರಣ್ ಅವರು ಗುರುವಾರ ಎಲ್ಲ ಮಕ್ಕಳಿಗೂ ತಲಾ 1100 ರೂ. ಮೌಲ್ಯದ ಡಿಡಿ ವಿತರಿಸಿದರು.

ನಮ್ಮ ಅಕೌಂಟ್​ನಲ್ಲಿ ತಾಂತ್ರಿಕ ತೊಂದರೆಯಾಗಿತ್ತು. ಪ್ರಧಾನ ಕಾರ್ಯದರ್ಶಿ ಕೆಲಸ ಬಿಟ್ಟಿದ್ದರಿಂದ ವಿದ್ಯಾರ್ಥಿಗಳ ಚೆಕ್​ ಬೌನ್ಸ್​ ಆಗಿದೆ. ಅದನ್ನು ಸರಿಪಡಿಸುವಲ್ಲಿ ಕೆಲವು ತಿಂಗಳಾಯ್ತು. ತಡವಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ರೋಷನ್​ ತಾಜ್​ ಹೇಳಿದರು.

 
 
 
 
 
 
 
 
 
 
 

Leave a Reply