​ಡಾ.ಅನು ಡೆಂಟಲ್ ಮತ್ತು ಆಯುರ್ವೇದ ಹಾಗೂ ಚೈತನ್ಯ ಫೌಂಡೇಶನ್ ಕಡೆಕಾರ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

​ಡಾ. ಅನು ಡೆಂಟಲ್ ಮತ್ತು ಆಯುರ್ವೇದ ಹಾಗೂ ಚೈತನ್ಯ ಫೌಂಡೇಶನ್ ಕಡೆಕಾರ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಬಲಪಾಡಿ ಕಾರ್ತಿಕ್ ಎಸ್ಟೇಟ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಲನಚಿತ್ರ ನಟಿ ಹಾಗೂ ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಅವರು ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ವರುಷದ ವಿಶ್ವ ಮಹಿಳಾ ದಿನಾಚರಣೆಯ ವಿಷಯ ಡಿಜಿಟ್-ಆಲ್ : ಇನೋವೇಶನ್ ಆಂಡ್ ಟೆಕ್ನೋಲಜಿ ಫಾರ್ ಜೆಂಡರ್ ಇಕ್ವಾಲಿಟಿ. ಈ ನಿಟ್ಟಿನಲ್ಲಿ ಈ ಡಿಜಿಟಲ್ ಪ್ರಪಂಚದಲ್ಲಿ ಎಲ್ಲ ಮಹಿಳೆಯರು ಕ್ರೀಯಾ ಶೀಲವಾಗಿ, ಧನಾತ್ಮಕವಾಗಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಮತ್ತು ಸಮಾಜ ಲಿಂಗ ತಾರತಮ್ಯವಿಲ್ಲದೆ ತಮ್ಮ ಅನಿಸಿಕೆಗಳನ್ನು  ಕೊಡುವುದರಲ್ಲಿ ಪ್ರಭುದ್ಧವಾಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರಸೂತಿ ತಜ್ಞೆ ಡಾ. ರಾಜಲಕ್ಷ್ಮೀ ಅವರು ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರು ಪ್ರಾಚೀನ ದಿನಗಳಿಂದಲೂ ತಮ್ಮ ಪ್ರಾಮುಖ್ಯತೆಯನ್ನು ತೋರಿಸಿದ್ದಾರೆ. ಹಿಂದಿನ ಕಾಲದಲ್ಲಿ ಅನುಭವದ ಆಧಾರದಲ್ಲಿ ಮಹಿಳೆ ಯರು ಮನೆಯಲ್ಲಿಯೇ ಪ್ರಸೂತಿ ಯನ್ನು ಮಾಡಿಸುತ್ತಿದ್ದರು. ಇವತ್ತು ಆರೋಗ್ಯ ಕ್ಷೇತ್ರದಲ್ಲಿ ಸುಮಾರು 70 ಶೇಕಡಾ ಜನ ಮಹಿಳೆಯರಿದ್ದಾರೆ ಎನ್ನಲು ಸಂತೋಷವಾಗುತ್ತಿದೆ ಎಂದರು.

ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಧುಮೇಹ ತಜ್ಞೆ ಡಾ. ಶ್ರತಿ ಬಲ್ಲಾಳ್ ಅವರು ಮಾತನಾಡಿ ಶಿಸ್ತು ಬದ್ಧವಾದ ಜೀವನ ಶೈಲಿಯ ಮೂಲಕ ಮಹಿಳೆ ತನ್ನ , ತನ್ನ ಕುಟುಂಬ ಹಾಗೂ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಾದ ಚೈತ್ರ ಶೆಟ್ಟಿ, ನೀಲಾವತಿ ಎ, ವಿಮಲಾಕ್ಷಿ ದಿವಾಕರ್, ಲೀಲಾ ಭಟ್, ಪೂರ್ಣಿಮಾ ಜನಾರ್ದನ್ , ಶಾಲಿನಿ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಉದ್ಯಮಿ ಸುಜಾತಾ ಬಾಳಿಗ, ಭಾಜಾಪಾ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಕೆಪಿಸಿಸಿ ವಕ್ತಾರೆ ವೆರೋಣಿಕಾ ಕರ್ನೇಲಿಯೋ, ಅಂಬಲಪಾಡಿ ಕಿದಿಯೂರು ವಿದ್ಯಾಸಮುದ್ರ ಶಾಲೆಯ ಪ್ರಾಂಶುಪಾಲೆ ಶ್ಯಾಮಲಾ ಪ್ರಸಾದ್, ಕನ್ನಡ ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ, ಸಾಫಲ್ಯಾ ಟ್ರಸ್ಟ್ ನ ಪ್ರವರ್ತಕರಾದ ನಿರುಪಮಾ ಪ್ರಸಾದ್ ಶೆಟ್ಟಿ, ಚೈತ್ಯನ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರು ಉಪಸ್ಥಿತರಿದ್ದರು.

ಅನು ಡೆಂಟಲ್ ಮತ್ತು ಅಯುರ್ವೇದದ ಡಾ. ಅನುಪಮಾ ಸುನೀಲ್ ಸ್ವಾಗತಿಸಿದರು. ಡಾ. ರಕ್ಷಾ ವಂದಿಸಿದರು. ಡಾ. ಶ್ರೀಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply