ಶಿಸ್ತಿನ ಜೀವನ ಸಾಧನೆಗೆ ಸಹಕಾರಿ – ಅಂಡಾರು ದೇವಿ ಪ್ರಸಾದ್ ಶೆಟ್ಟಿ

ಭಾರತ ಸೇವಾದಳದ ಸ್ಥಾಪಕ ಡಾ| ಎನ್‌ ಎಸ್‌ ಶ್ರೀ ವರ್ಡೀಕರ್‌ ರವರು ವೃತ್ತಿಯಲ್ಲಿ ವೈದ್ಯ, ಆದರೆ ಪ್ರವೃತ್ತಿಯಲ್ಲಿ ಒಬ್ಬ ಧೀಮಂತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕೊಡುಗೆ ಅನನ್ಯವಾಗಿತ್ತು. ಅವರ ಶಿಸ್ತಿನ ಜೀವನ ಎಲ್ಲರಿಗೂ ಅನುಕರಣೀಯ.

ವಿದ್ಯಾರ್ಥಿಗಳು ಅವರನ್ನು ಆದರ್ಶವ್ಯಕ್ತಿಯನ್ನಾಗಿ ಸ್ವೀಕರಿಸಿ ಶಿಸ್ತುಬದ್ಧ ಜೀವನದೊಂದಿಗೆ ಸಾಧಕರಾಗಬೇಕು ಎಂದು ಅಂಡಾರು ದೇವಿ ಪ್ರಸಾದ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಭಾರತ ಸೇವಾ ದಳ ಉಡುಪಿ ಜಿಲ್ಲಾ ಸಮಿತಿ ಮತ್ತು ಭಾರತ ಸೇವಾದಳ ತಾಲೂಕು ಘಟಕ ಸಮಿತಿ ಇವರ ಜಂಟಿ ಸಹಭಾಗಿತ್ವದಲ್ಲಿ ನಡೆದ ಭಾರತ ಸೇವಾದಳದ ಸಂಸ್ಥಾಪಕ ಡಾ| ಎನ್‌ ಎಸ್‌ ಹರ್ಡೀಕರ್‌ ರವರ ಸಂಸ್ಮರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.

ಹರ್ಡೀಕರ್‌ ಭಾವ ಚಿತ್ರಕ್ಕೆ ಪುಷ್ಪ ನಮನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಮಹಾಬಲ ಕುಂದರ್‌ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಿಕ್ಕ ಮಕ್ಕಳೂ ಕೂಡ ಭಾಗವಹಿಸಿದ್ದನ್ನು ನೆನಪಿಸುತ್ತಾ 77 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಸುಮಾರು ಹತ್ತು ಸಾವಿರ ರುಪಾಯಿ ಮೊತ್ತದ ಕ್ಯಾನ್ವಾಸ್‌ ಶೂ ಗಳನ್ನು ವಿತರಿಸಿದರು.

ಜಿಲ್ಲಾ ಸಂಘಟಕರಾದ ಶ್ರೀ ಪಕೀರಪ್ಪ ಗೌಡ ಪ್ರಸ್ತಾವನೆಗೈದರು. ಮುಖ್ಯ ಶಿಕ್ಷಕಿ ಇಂದಿರಾ ವಂದಿಸಿದರು. ಸೇವಾದಳ ಸಂಯೋಜಕಿ ಮಂಜುಳ ಹಾಗೂ ಸಂಸ್ಥೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply