ವಿದ್ಯಾಪೋಷಕ್ ಸನಿವಾಸ ಶಿಬಿರ ಉದ್ಘಾಟನೆ.

ಉಡುಪಿ : ಯಕ್ಷಗಾನ ಕಲಾರಂಗ ಪ್ರಥಮ ಪಿ.ಯು.ಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಳೆದ ೧೦ ವರ್ಷಗಳಿಂದ ಅಂಬಲಪಾಡಿ ದೇವಳದ ವಠಾರದಲ್ಲಿ ನಡೆಸಿಕೊಂಡು ಬಂದಿರುವ ಐದು ದಿನಗಳ ಸನಿವಾಸ ಶಿಬಿರ ಏಪ್ರಿಲ್ ೧೬ ರಂದು ದೇವಳದ ಭವಾನಿ ಮಂಟಪದಲ್ಲಿ ಆರಂಭಗೊAಡಿತು. ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಿಎ ನಂದಗೋಪಾಲ ಶೆಣೈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮದಿಂದ ಉನ್ನತ ಸ್ಥಾನ ಪಡೆಯಬೇಕೆಂದು ಕರೆ ನೀಡಿದರು. ಅಭ್ಯಾಗತರಾಗಿ ಗ್ಲೋಬಲ್ Iಖಿ ಬೆಂಗಳೂರಿನ ನಿರ್ದೇಶಕರಾದ ಶ್ರೀಮತಿ ಅರುಂಧತಿ ರಾವ್, ನೋಟರಿ, ನ್ಯಾಯವಾದಿಗಳಾದ ಎ. ಸಂಕಪ್ಪ, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಶ್ರೀ ಅರುಣ್ ಕುಮಾರ್, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ, ಸಿಂಗಾಪುರದಲ್ಲಿ ತಂತ್ರಜ್ಞರಾಗಿರುವ ಎ. ವೈ. ಮೋಹನ್ ಭಾಗವಹಿಸಿದ್ದರು. ಮೈಲೈಫ್ ಹುಬ್ಬಳ್ಳಿ ಇದರ ಸ್ಥಾಪಕ, ಶಿಬಿರದ ನಿರ್ದೇಶಕ ಶ್ರೀ ಪ್ರವೀಣ್ ಗುಡಿ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಸಿಎ ಓದುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಕವನಾಳಿಗೆ ಲ್ಯಾಪ್‌ಟಾಪನ್ನು ನೀಡಲಾಯಿತು. ಅಧ್ಯಕ್ಷರಾದ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಾಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ನಾರಾಯಣ ಎಮ್. ಹೆಗಡೆ, ಎಚ್. ಎನ್. ಶೃಂಗೇಶ್ವರ್, ಮನೋಹರ್ ಕೆ., ದಾನಿಗಳಾದ ವಿಲಾಸಿನಿ ಬಿ. ಶೆಣೈ, ರಂಗಪ್ಪಯ್ಯ ಹೊಳ್ಳ ಹಾಗೂ ಕಾರ್ಯಕಾರೀ ಸಮಿತಿಯ ಸದಸ್ಯರಾದ ಅನಂತರಾಜ ಉಪಾಧ್ಯಾಯ, ಕಿಶೋರ್ ಸಿ. ಉದ್ಯಾವರ, ಗಣೇಶ್ ರಾವ್ ಎಲ್ಲೂರು, ಕೆ. ಅಜಿತ್ ಕುಮಾರ್, ಎಚ್. ಎನ್. ವೆಂಕಟೇಶ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ಸಂಯೋಜಿಸಿದರು, ಎ. ನಟರಾಜ ಉಪಾಧ್ಯಾಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಶೋಕ್ ಎಮ್. ವಂದನಾರ್ಪಣೆ ಸಲ್ಲಿಸಿದರು. ಶಿಬಿರದಲ್ಲಿ ೨೩೦ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

 
 
 
 
 
 
 
 
 
 
 

Leave a Reply