ವಿಕಲ ಚೇತನ ಬಂಧುಗಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ್ ಹಾಗೂ ಅಕ್ಕಿ ವಿತರಣಾ ಕಾರ್ಯಕ್ರಮ

ಆದಿತ್ಯ ಟ್ರಸ್ಟ್ (ರಿ ), ನಕ್ರೆ ಕಾರ್ಕಳ,ಹಾಗೂ ಚೋಸನ್ ಜನರೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಇವರ ಸಂಯುಕ್ತ ಆಶ್ರಯ ಮತ್ತು ಶ್ರೀ ವರದ ಕುಮಾರ್ ಭಟ್ ಇವರ ಪ್ರಯೋಜಕತ್ವ ದೊಂದಿಗೆ ವಿಕಲ ಚೇತನ ಬಂಧುಗಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ್ ಹಾಗೂ ಅಕ್ಕಿ ವಿತರಣಾ ಕಾರ್ಯಕ್ರಮವು ದಿನಾಂಕ 09-10-2022ರಂದು ಯುವ ಸಂಗಮ, ಆನಂದಿ ಮೈದಾನ ಇಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೋಸೆನ್ ಜನರೇಶನ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಶ್ರೀಮತಿ ಅಭಿಗೆಲ್ ಶೆಲ್ಡನ್ ಇವರು ಆಗಮಿಸಿದ್ದರು. ಇವರು ಮಾತನಾಡುತ್ತ, ವಿಕಲ ಚೇತನರ ಸುಶ್ರುಷೆ ಮಾಡುವ ಮೂಲಕ ಅವರ ಮನಸ್ಸು, ಭಾವನೆಗಳಿಗೆ ಸ್ಪಂದಿಸಿ ಹೃದಯಂತರಾಳದಲ್ಲಿ ಒಂದಾಗಿ ಸೇರಿ ಚಿಕಿತ್ಸೆ ನೀಡಿದಾಗ ಅಪಾರವಾದ ಆನಂದವು ದೊರಕುತ್ತದೆ. ಆಗ ಅವರಲ್ಲಿ ನಾವು ದೇವರನ್ನು ಕಾಣಲು ಸಾಧ್ಯ. ಒಬ್ಬ ಸುಶ್ರುಶಿಕಿಯಾಗಿ ಇದನ್ನು ನಾನು ಕಂಡಿದ್ದೇನೆ, ಆದಿತ್ಯ ಟ್ರಸ್ಟಿನೊಂದಿಗೆ ಸೇರಿಕೊಂಡು ಕಾರ್ಯಕ್ರಮ ಮಾಡುತ್ತಿರುವುದು ಸಂತೋಷವನ್ನು ನೀಡಿದೆ ಎಂದರು. ಶ್ರೀ ಶಂಕರ ಪೂಜಾರಿ, ಅಧ್ಯಾಪಕರು, ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಶಾಲು, ಫಲ ಪುಷ್ಪ, ನಗದನ್ನಿತ್ತು ಸನ್ಮಾನಿಸಲಾಯಿತು. ಅವರು ಮಾತನಾಡುತ್ತ, ತಮ್ಮ ಅಧ್ಯಾಪಕ ವೃತ್ತಿಯಲ್ಲಿ ತಾವು ಗಳಿಸಿದ ಸುಧೀರ್ಘ ಅನುಭವಗಳನ್ನು ಹಂಚಿಕೊಂಡು, ವಿಕಲ ಚೇತನರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಹಿಸಬೇಕು. ಸಮಾಜದಲ್ಲಿ ಅವರಿಗೂ ಸಹಾಯ, ಸಹಕಾರವನ್ನು ಕೊಟ್ಟಾಗ ಅವರ ಬಾಳಿನಲ್ಲೂ ಬೆಳಕನ್ನು ಕಾಣಲು ಸಾಧ್ಯ ಎಂದರು. ಶ್ರೀ ಜಾರ್ಜ್ ಕ್ರ್ಯಾಸ್ಟಲಿನೋ, ನಿವೃತ್ತ,ಮುಖ್ಯ್ಯೊಪಾಧ್ಯಾಯರು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇವರು, ಗ್ರಾಮೀಣ ಪ್ರದೇಶದಲ್ಲಿರುವ ವಿಕಲ ಚೇತನರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ಶ್ಲಾಘನಿಯವಾದುದು. ಆದಿತ್ಯ ಟ್ರಸ್ಟ್ ಈ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು. ಆದಿತ್ಯ ಟ್ರಸ್ಟಿನ ಅಧ್ಯಕ್ಷ ಮಂಜುನಾಥ ತೆಂಕಿಲ್ಲಾಯ ಇವರು ವಿಕಲ ಚೇತನರಿಗೆ ಸಮಾನ ಅವಕಾಶ ಕೊಟ್ಟಾಗ ಅವರೂ ಕೂಡ ಸಮಾಜದಲ್ಲಿ ಸ್ವತಂತ್ರವಾಗಿ ಬದುಕನ್ನು ಸಾಗಿಸಬಲ್ಲರು. ಮುಂದಿನ ದಿನಗಳಲ್ಲಿ ಅವರಿಗಾಗಿ ಆಟೋಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಲ್ಲೂರುವ ಪ್ರತಿಭೆಯನ್ನು ಹೊರಗಡೆ ತರುವ ಆಲೋಚನೆ ಇದೆ. ಅದಕ್ಕೆ ಸರ್ವರ ಸಹಕಾರ ಅಗತ್ಯವಿದೆ ಎಂದರು. ಶ್ರೀ ಚಂದ್ರಹಾಸ ಸುವರ್ಣ ಇವರು ಉಪಹಾರದ ಪ್ರಾಯೋಜಕತ್ವ ವಹಿಸಿಕೊಂಡು ಸಹಕರಿಸಿದರು. ಡಾಟ್ ನೆಟ್ ಕಂಪ್ಯೂಟರ್ ಮಾಲಕಿ ಶ್ರೀಮತಿ ರುಬಿನಾ, ಶ್ರೀಮತಿ ಮಾಧವಿ, ಸಮನ್ವಯ ಅಧಿಕಾರಿ ಸಂಜೀವಿನಿ ಗ್ರೂಪ್, ಕುಕ್ಕುಂದೂರು ಗ್ರಾಮ ಪಂಚಾಯತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ರಂಜಿತಾ ಪ್ರಾರ್ಥಿಸಿದರು. ಕು. ಶ್ರೀರಕ್ಷಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀ ರಮೇಶ್ ಇವರು ಕೊನೆಯಲಲ್ಲಿ ವಂದನಾರ್ಪಣೆ ಮಾಡಿದರು.

 
 
 
 
 
 
 
 
 
 
 

Leave a Reply