ದೊಡ್ಡಣ್ಣ ಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ರಂಗಪೂಜೆ ಸಹಿತ ಬಲಿ ಉತ್ಸವ ಸಂಪನ್ನ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಟ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ರಂಗ ಪೂಜಾ ಸಹಿತ ಬಲಿ ಉತ್ಸವವು ಸಂಪನ್ನಗೊಂಡಿತು.

ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವಿಜಯದಶಮಿಯ ಪರ್ವಕಾಲದಲ್ಲಿ ನೆರವೇರಿತು.

ಕ್ಷೇತ್ರದ ಪರವಾಗಿ ಸಂಪನ್ನಗೊಂಡ ರಂಗ ಪೂಜಾ ಮಹೋತ್ಸವದಲ್ಲಿ ತಂತ್ರವರಿಯರು
ಉಲಿಯುವ ದೇವಿಯ ಧ್ಯಾನವನ್ನು ಆಲಿಸಲು ಭಕ್ತ ಸಮೂಹ ಕ್ಷೇತ್ರದಲ್ಲಿ ಕಿಕ್ಕೇರಿದು ತುಂಬಿತ್ತು. ರಂಗ ಪೂಜೆಯಲ್ಲಿ ತಪ್ತತ್ ದೇವತೆಗಳಿಗೆ ಉಣಬಡಿಸಿದ ಅನ್ನಮುದ್ರೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ಪಳ್ಳಿ ಗುರುರಾಜ ಭಟ್ ಅವರು ನೆರವೇರಿಸಿದ ಬಲಿ ಉತ್ಸವದಲ್ಲಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸುತ್ತು ಕ್ಷೇತ್ರದ ಸ್ವಾತಿ ಆಚಾರ್ಯ ಅವರಿಂದ ಯಕ್ಷ ನೃತ್ಯ ಶ್ರೀಮತಿ ಪ್ರಣಮ್ಯ ಅವರಿಂದ ನೆರವೇರಿತು.ಬೆಲ್ಮಣ್ಣು ವನದುರ್ಗ ಪಲ್ಲಕ್ಕಿ ಬಳಗದವರಿಂದ ವಿಶಿಷ್ಟವಾದ ಚಾಮರಸಹಿತವಾದ ನಾಟ್ಯ ಜಾನಕರ್ಷಣೆಗೊಂದಿತು. ಪುಷ್ಪಾಲಂಕೃತ ಗೊಂಡ ಮಂಟಪದಲ್ಲಿ ನೆರವೇರಿದ ವಸಂತ ಪೂಜೆಯಲ್ಲಿ ಅಷ್ಟಾವಧಾನ ಸೇವೆ ಬಳಗದವರಿಂದ ಹಾಗೂ ಡಾಕ್ಟರ್ ಅರವಿಂದ ಹೆಬ್ಬಾರ್ ಮತ್ತು ಸಂಗೀತ ಸಾಮ್ರಾಟ್ ಕುಮಾರಿ ಸಮನ್ವಿ ಸಂಗೀತ ಸೇವೆ ನೆರವೇರಿಸಿದರು.

ಹತ್ತು ದಿನಗಳ ಕಾಲ ನಿರಂತರವಾದ ಕಲಾ ರಾಧನೆ ಸಮಾರಾಧನೆ ಮತ್ತು ದೇವತಾರಾಧನೆಯಿಂದ ಉತ್ಸವ ಮಹೋತ್ಸವವಾಗಿ ಅಭೂತಪೂರ್ವವಾಗಿ ಸರ್ವರ ಸಹಕಾರದೊಂದಿಗೆ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply